ಪೆರ್ಲ : ರಂಗ ಡಿಂಡಿಮ ಪೆರ್ಲ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಬೆಳಗ್ಗೆ 10.30 ಗಂಟೆಗೆ ಪೆರ್ಲ ಸ.ನಾ.ಶಾಲೆಯ ಕಲಾ ನಿಲಯದಲ್ಲಿ ಜರಗಲಿದೆ.
ಹಿರಿಯ ರಂಗನಟ-ಶಿಕ್ಷಣ ತಜ್ಞರು-ನಿವೃತ್ತ ಪ್ರಾಶುಂಪಾಲ ಯತೀಶ್ ಕುಮಾರ್ ರೈ ಮುಳ್ಳೇರಿಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ನಾಟಕ ಕರ್ತೃ, ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಸಭೆಯ ಅಧ್ಯಕ್ಷತೆ ವಹಿಸುವರು. ಡಾ.ಆಶಾಲತಾ ಚೇವಾರು, ಸದಾಶಿವ ಭಟ್ ಹರಿ ನಿಲಯ, ಮೊಹಮ್ಮದಾಲಿ ಪೆರ್ಲ, ಉದಯ ಚೆಟ್ಟಿಯಾರ್ ಪೆರ್ಲ, ಸುಧಾಕರ ಮಾಸ್ತರ್ ಕಾಟುಕುಕ್ಕೆ, ಅಜಯ್ ಪೈ ಅಮೆಕ್ಕಳ, ಕೃಷ್ಣಪ್ಪ ಬಂಬಿಲ, ಕಿರಣ್ ಕಲಾಂಜಲಿ ಕಾಸರಗೋಡು, ರಾಜೇಶ್ ಬಜಕೂಡ್ಲು ಸಭೆಯಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ 2023-24ನೇ ಸಾಲಿನ ಮಕ್ಕಳ ನಾಟಕೋತ್ಸವ 'ಕಣ್ಣಾ ಮುಚ್ಚೆ ಕಾಡೆ ಕೂಡೆ ' ರಂಗಾಭಿನಯ ತರಬೇತಿಗೆ ಚಾಲನೆ, ವಾರ್ಷಿಕ ಸದಸ್ಯತ್ವ ವಿತರಣೆ ಹಾಗೂ ರಂಗ ಡಿಂಡಿಮ ತಂಡದಿಂದ ರಂಗಗೀತೆಗಳ ಪ್ರಸ್ತುತಿ ಜರಗಲಿದೆ.

