ಬದಿಯಡ್ಕ : ಕುಂಬ್ಡಾಜೆ ಗ್ರಾಮ ಪಂಚಾಯತ್ನ ವಾರ್ಡಿನಲ್ಲಿ ಸಂಚಾರಕ್ಕೆ ಅಯೋಗ್ಯವಾಗಿರುವ ತಲೆಬೈಲು ಬೆಳಿಂಜ ಮವ್ವಾರು ರಸ್ತೆಯ ಡಾಮರೀಕರಣ ನಡೆಸುವಂತೆ ಒತ್ತಾಯಿಸಿ ತಲೆಬೈಲು ನಾಗರಿಕರು ಕುಂಬ್ಡಾಜೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ ಅವರಿಗೆ ಮನವಿ ಸಲ್ಲಿಸಿದರು. ನಾಗರಿಕರ ಪರವಾಗಿ ಅಚ್ಚುತ ಮಣಿಯಣಿ, ರಾಮಚಂದ್ರ, ವೆಂಕಟೇಶ್, ವಿನ್ಸೆಂಟ್, ಹರೀಶ್.ಎನ್, ವಿಜಯ್, ರಮೇಶ್, ಶಿವಪ್ರಸಾದ್, ವಿವಿನ್ ಮೊದಲಾದವರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

