ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ | ದ್ವಿತೀಯ ವಾರ್ಷಿಕ ದಿನಾಚರಣೆ ಹಾಗೂ ವರ್ಷಾವದಿ ಜಾತ್ರಾ ಮಹೋತ್ಸವ ನಾಳೆ
December 29, 2023
0
ಸಜೀಪಮೂಡ : ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜೀಪಮೂಡ ಇದರ ದ್ವಿತೀಯ ವಾರ್ಷಿಕ ದಿನಾಚರಣೆ ಹಾಗೂ ವರ್ಷಾವದಿ ಜಾತ್ರಾ ಮಹೋತ್ಸವವು 30-12-2023ನೇ ಶನಿವಾರ ಬ್ರಹ್ಮಶ್ರೀ ನಿಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪುಣ್ಯಾಹ ಪಂಚಗವ್ಯ, ಗಣಪತಿ ಹೋಮ, ಬಿಂಬಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಆಶ್ಲೇಷ ಬಲಿ ಪೂಜೆ, ನಾಗತಂಬಿಲ ಫಲಪಂಚಾಮೃತ ಅಭಿಷೇಕ, ರಂಗ ಪೂಜೆ, ದೇವರ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ರಾಜಾಂಗಣ ಪ್ರಸಾದ, ನೃತ್ಯ ಬಲಿ ಅನ್ನ ಸಂತರ್ಪಣೆಯೊಂದಿಗೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವಭಾರತಿ ಯಕ್ಷ ಸಂಜೀವಿನಿ(ರಿ.) ಮುಡಿಪು ಇವರಿಂದ ಯಕ್ಷಗಾನ ತಾಳಮದ್ದಳೆ, ವಾಲಿ ಮೋಕ್ಷ ಜರಗಲಿದೆ. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
