ಮಂಗಳೂರು, ಸೆ. 22: ಮಂಗಳೂರು ಕದ್ರಿ ನಿವಾಸಿ ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕ್ಲಾಡ್ ಬನವೆಂಚರ್ ರೇಮಂಡ್ ಇಗ್ನೀಷಿಯಸ್ ನಝರೆತ್ (ಸಿ.ಬಿ.ಆರ್.ಐ ನಝರೆತ್) (89) ಸೆ. 19ರಂದು ಭಾನುವಾರ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಸಂತ ಅಲೋಷಿಯಸ್ನಲ್ಲಿ ವಿಜ್ಞಾನ ಪದವಿ ಪಡೆದ ಬಳಿಕ ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಬಳಿಕ ನ್ಯಾಯವಾದಿಯಾಗಿ ವೃತ್ತಿ ಆರಂಬಿಸಿದ್ದರು. 1966ರಲ್ಲಿ ನ್ಯಾಯಾಧೀಶರಾಗಿ ನ್ಯಾಯಾಂಗ ಸೇವೆಯನ್ನು ಆರಂಬಿಸಿದ ಅವರು ಕಾರವಾರ, ಕುಮಟಾ (ಉತ್ತರ ಕನ್ನಡ), ದಕ್ಷಿಣ ಕನ್ನಡ, ಬೆಂಗಳೂರು, ಭಧ್ರಾವತಿ, ಚಿತ್ರದುರ್ಗಾದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ , ಗುಲ್ಬರ್ಗಾದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿ ನಿವೃತ್ತರಾದರು. ನಿವೃತ್ತಿಯ ಬಳಿಕ ಗುಲ್ಬರ್ಗಾ, ಬೀದರ್, ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಕನ್ಸ್ಯೂಮರ್ ಫಾರಂನ ಅಧ್ಯಕರಾಗಿ ಸೇವೆ ಸಲ್ಲಿಸಿದ್ದರು. ಕ್ರೀಡಾಪಟುವಾಗಿದ್ದ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.
