ಮಂಜೇಶ್ವರ: ಕೇಂದ್ರ ಹಾಗೂ ರಾಜ್ಯ ಸರಕಾರದ ಜನದ್ರೋಹ ನೀತಿಯಿಂದ ಕಂಗೆಟ್ಟಿರುವ ಜನ ಸಾಮಾನ್ಯರು ಇದೀಗ ಪುನಃ ಕಾಂಗ್ರೆಸ್ ನ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಿದ್ದು ಇದು ಜನ ಬೆಂಬಲಿತ ಪಕ್ಷ ಬಲ ವರ್ಧನೆಗೆ ಸಾಧ್ಯವಾಗಲಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್.ಅಭಿಪ್ರಾಯಪಟ್ಟರು. ಅವರು ಹೊಸಂಗಡಿಯಲ್ಲಿ ನಡೆದ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಪಕ್ಷದ ಪ್ರಸಕ್ತ ಕಾರ್ಯ ಚಟುವಟಿಕೆಯ ಬಗ್ಗೆ ಮಾತನಾಡುತ್ತಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ.ಕೆ.ಮಹಮ್ಮದ್ ಸಭೆಯ ಅಧ್ಯಕ್ಷತೆವಹಿಸಿದ್ದರು.
ಪಕ್ಷದ ನೇತಾರರಾದ ಪಿ.ಸೋಮಪ್ಪ,ಚಂದ್ರಶೇಖರ ಶೆಟ್ಟಿ ಬೆಜ್ಜ,ಅಸೀಸ್ ಕಲ್ಲೂರ್ಬೆ, ಸದಾಶಿವ.ಕೆ, ಮೊಹಮ್ಮದ್ ಮಹಲ್,ಸೀತಾ ಡಿ,ಮೊಹಮ್ಮದ್ ಕೆದುಂಬಾಡಿ, ನಾರಾಯಣ ಶೆಟ್ಟಿ ಪಾವೂರು,ಶಾಫಿ ಮಾಸ್ತರ್,ಸತ್ಯನ್ ಉಪ್ಪಳ,ಒ.ಎಂ.ಕೃಷ್ಣ,ಅಲ್ಮೇಡಾ ಡಿ.ಸೋಜ, ಪ್ರಾನ್ಸಿಸ್ ಡಿ.ಸೋಜ,ದಿವಾಕರ ಎಸ್.ಜೆ.ಸಭೆಯಲ್ಲಿ ಉಪಸ್ಥಿತರಿದ್ದರು. ಮಂಜೇಶ್ವರ ಬ್ಲೋಕ್ ನಲ್ಲಿ ಪಕ್ಷದ ಶಕ್ತಿಬಲವರ್ಧನೆ ನಡೆಸಲು ಹಾಗೂ ಅಕ್ತೋಬರ್ 2ರಂದು ಗಾಂಧೀ ಜಯಂತಿ ಪ್ರಯುಕ್ತ ನಡೆಯುವ ಪಾದಯಾತ್ರೆ ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮಹಮ್ಮದ್ ಸೀಗಂದಡಿ ಸ್ವಾಗತಿಸಿ ನಾಗೇಶ್ ಮಂಜೇಶ್ವರ ವಂದಿಸಿದರು.
