ಪಡುಕುತ್ಯಾರು: ಮಕ್ಕಳನ್ನು ಸಂಸ್ಕಾರದ ವಾರಸುದಾರರನ್ನಾಗಿಸಬೇಕು, ಅವರಿಗೆ ಸಂಸ್ಕಾರದ ಆಸ್ತಿ ನೀಡಿ, ಅವರಿಗೆ ಕೇವಲ ಸಂಪತ್ತನ್ನು ಆಸ್ತಿಯಾಗಿ ನೀಡಿದಲ್ಲಿ ಮಾತ್ರ ಪ್ರಯೋಜನವಿಲ್ಲ. ಮಕ್ಕಳನ್ನು ಮಠ ಮಂದಿರ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಕರೆತರುವ ಕೆಲಸ ಪೋಷಕರಿಂದ ನಡೆಯಬೇಕು ಹಾಗಿದ್ದಲ್ಲಿ ಮಾತ್ರ ನಮ್ಮ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳ ಹಸ್ತಾಂತರ ಮುಂದಿನ ಪೀಳಿಗೆಗೆ ಸಾಧ್ಯ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಬಳಿಕ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು.
ಇಂದು ಮತಾಂತರ ನಿಷೇಧ ಕಾನೂನು ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದಿನ ಸನ್ನಿವೇಶಗಳನ್ನು ಗಮನಿಸಿದರೆ ಮತಾಂತರ ನಿಷೇಧ ಕಾನೂನು ಅತೀ ಅಗತ್ಯ. ನಾವು ಒಟ್ಟಾಗಿ ಬೆಂಬಲಿಸಲೇಬೇಕಿದೆ. ನಮ್ಮ ಮುಂದೆ ಮತಾಂತರ ನಡೆದ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆನ್ನುವ ಹಲವು ನಿವೇದನೆಗಳಿವೆ. ಸಮಾಜದ ಅಮಾಯಕ ಜನರನ್ನು ಆಮಿಷವೊಡ್ಡಿ ಮತಾಂತರಗೊಳಿಸುವ ಹುನ್ನಾರಗಳನ್ನು ತಡೆಯಲೇಬೇಕಿದೆ. ಈ ನಿಟ್ಟಿನಲ್ಲಿ ಆನೆಗುಂದಿ ಗುರುಸೇವಾ ಪರಿಷತ್ ಹಾಗೂ ಶ್ರೀ ಸರಸ್ವತೀ ಮಾತೃಮಂಡಳಿಯು ಜಂಟಿಯಾಗಿ ಗ್ರಾಮ ಗ್ರಾಮಗಳಲ್ಲಿ ತನ್ನ ಶಾಖೆಗಳನ್ನು ರಚಿಸಿ ಸಮಾಜದಲ್ಲಿ ಜಾಗೃತಿಮೂಡಿಸಲು ಮುಂದಾಗುವಂತೆ ಅವರು ಸೂಚನೆ ನೀಡಿದರು.
ನಮ್ಮ ಸಂಸ್ಕಾರ, ಪರಂಪರೆಯ ಬಗ್ಗೆ ಪೋಷಕರು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಅರಿವು ಮೂಡಿಸಲು ಪ್ರಯತ್ನಿಸಬೇಕು. ನಮ್ಮ ಜಾಗರೂಕತೆಯಲ್ಲಿ ನಾವು ಇದ್ದಲ್ಲಿ ಎಲ್ಲ ರೀತಿಯ ಪ್ರಭಾವಗಳನ್ನು ಮಟ್ಟಹಾಕಲು ಸಾಧ್ಯವಿದೆ. ತಮ್ಮ ಮಕ್ಕಳ ನಡೆ ನುಡಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಅವರು ಎಚ್ಚರಿಸಿದ ಅವರು ಪೋಷಕರ ಕಾಳಜಿಯ ಕೊರತೆಯೇ ಎಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ. ಆದಷ್ಷು ಸ್ವ ಉದ್ಯೋಗವ್ಯವಸ್ಥೆಯನ್ನು ಅವಲಂಬಿಸಿದರೆ ಚಿಕ್ಕ ಆದಾಯಕ್ಕಾಗಿ ಇತರರನ್ನು ಅವಲಂಬಿಸಿ ಮುಂದೆ ದುರಂತಕ್ಕೆ ಒಳಗಾಗಗುವುದು ತಪ್ಪುತ್ತದೆ ಎಂದು ಅವರು ಉದಾಹರಣೆಗಳೊಂದಿಗೆ ವಿವರಿಸಿದರು.
ಎರಡು ತಿಂಗಳ ಚಾತುರ್ಮಾಸ್ಯದ ಯಶಸ್ಸಿಗೆ ಎಲ್ಲರ ಸಂಘಟಿತವಾದ ಸಮರ್ಪಣಾ ಮನೋಬಾವದ ಸೇವೆಯೇ ಕಾರಣ. ಇಂದಿನ ಅಭಿನಂದನೆ ಸೇವೆಗಿರುವ ಅದಕ್ಕೆ ಮಾನದಂಡವಲ್ಲ ಇದು ಅವರನ್ನು ಗುರುತಿಸುವಂತಹ ಸಣ್ಣ ಸಮಾರಂಭ. ಎಲ್ಲರ ಸಹಕಾರದಿಂದ ಮುಂದಿನ ಮಠದ ಪುನರುತ್ಥಾನದ ಯೋಜನೆಗಳು, ಎಲ್ಲ ಸಹ ಸಂಸ್ಥೆಗಳ ಯೋಜನೆಗಳು ಯಶಸ್ವಿಯಾಗುತ್ತದೆ ಎನ್ನುವ ಭರವಸೆಯಿದೆ ಎಂದು ಅವರು ನುಡಿದರು.
ಸಮಾರಂಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಅವರು ಶುಭಾಶಂಸನೆ ನಡೆಸುತ್ತಾ ಚಾತುರ್ಮಾಸ್ಯದ ಅವಧಿಯಲ್ಲಿ ಗುರುಗಳಿಗೆ ತಮ್ಮ ಆರಾಧನೆಯ ಮೂಲಕ ದೊರೆತ ಪುಣ್ಯದ ಫಲದಿಂದ ನಾಡು ಸುಭಿಕ್ಷವಾಗಲಿ, ಆನೆಗುಂದಿ ಮಠವು ಇದೀಗ ಸಮಸ್ತ ಹಿಂದೂ ಸಮಾಜದ ಶ್ರದ್ದಾ ಕೇಂದ್ರವಾಗಿದೆ. ಆನೆಗುಂದಿ ಮಠದ ಪುನರುತ್ಥಾನದ ಯೋಜನೆಗಳು ಸಾಕಾರವಾಗುವುದಕ್ಕೆ ನಾನೂ ದನಿಗೂಡಿಸುತ್ತೇನೆ ಎಂದು ಅವುರು ಭರವಸೆ ನೀಡಿದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ಅಸೆಟ್ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಆಭಿವೃದ್ದಿ ಟ್ಟಸ್ಟ್ ಅಧ್ಯಕ್ಷ ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕರಂಬಳ್ಳಿ ಜಯಕರ ಆಚಾರ್ಯ, ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಬೆಳುವಾಯಿ ಸುಂದರ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್ ಆಚಾರ್ಯ, ಉಳಿಯ ಭಾಲಕೃಷ್ಣ ಆಚಾರ್ಯ ಮೂಡುಬಿದ್ರೆ ಶುಭಹಾರೈಸಿದರು.
ಸಮಾರಂಭದಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಚಾತುರ್ಮಾಸ್ಯದ ಯಶಸ್ಸಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ.ಸೂರ್ಯ ಕುಮಾರ್ಆಚಾರ್ಯ ಹಳೆಯಂಗಡಿ, ಪಿ.ವಸಂತ ಆಚಾರ್ಯ ಕಾರ್ಕಳ, ಬೆಳುವಾಯಿ ಸೀತಾರಾಮ ಆಚಾರ್ಯ, ರತನ್ ಕುಮಾರ್ ಹೊಸಂಗಡಿ, ಎಚ್.ರತ್ನಾಕರ ಆಚಾರ್ಯ ಉದ್ಯಾವರ, ಪ್ರಶಾಂತ ಆಚಾರ್ಯ ಕಟಪಾಡಿ, ಕೆ. ರಾಘವೇಂದ್ರ ಆಚಾರ್ಯ ಉಡುಪಿ, ರವಿ ಆಚಾರ್ಯ ಕಾರ್ಕಳ, ಕನ್ಯಾನ ಜನಾರ್ಧನ ಆಚಾರ್ಯ, ಪಿ.ವಿ ಅಚ್ಯುತ ಆಚಾರ್ಯ ಉಡುಪಿ, ಶ್ರೀಧರ ಜೆ ಆಚಾರ್ಯ ಕಟಪಾಡಿ, ಗಣೇಶ್ ಆಚಾರ್ಯ ಕೋಟ, ರಾಜು ಎನ್. ಆಚಾರ್ಯ ಬೆಳ್ಳಂಪಳ್ಳಿ, ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ಪುರುಶೋತ್ತಮ ಆಚಾರ್ಯ ಪುತ್ತೂರು, ವಾಸುದೇವ ಆಚಾರ್ಯ ಮೂಳೂರು, ಪ್ರಸಾದ್ ಆಚಾರ್ಯ ಉಡುಪಿ, ಪ್ರಸಾದ್ ಆಚಾರ್ಯ ಎಲ್ಲೂರು, ಅಶೋಕ ಆಚಾರ್ಯ ಕುತ್ಯಾರು, ಗಂಗಾಧರ ಆಚಾರ್ಯ ಕುತ್ಯಾರು, ಗಣೇಶ್ ಆಚಾರ್ಯ ಕಾಪು, ಶಶಿಧರ ಆಚಾರ್ಯ ಎಲ್ಲೂರು, ವಿಠಲ ಆಚಾರ್ಯ ಪಣಿಯೂರು, ನವೀನ್ ಆಚಾರ್ಯ ಪಣಿಯೂರು, ರಮಾ ಎನ್. ಆಚಾರ್ಯ ಕಾರ್ಕಳ, ಗೀತಾ ಆಚಾರ್ಯ ಮೂಡಬಿದ್ರೆ, ಸುಮನಾ ಎಸ್. ಆಚಾರ್ಯ ತ್ರಾಸಿ, ರಮಾ ಎ. ಆಚಾರ್ಯ ಉಡುಪಿ, ಸುಮಾ ಆರ್. ಆಚಾರ್ಯ ಉದ್ಯಾವರ, ಸುಜಾತ ಎಸ್. ಆಚಾರ್ಯ ಕಾರ್ಕಳ, ಚಂದ್ರಾವತಿ ಎಸ್. ಆಚಾರ್ಯ ವಡೇರಹೋಬಳಿ, ರಶ್ಮಿತಾ ಎ. ಆಚಾರ್ಯ ಬೆಳುವಾಯಿ, ದೀಪಾ ಸುರೇಶ್ ಆಚಾರ್ಯ ಕಟಪಾಡಿ, ಶಾಲಿನಿ ಆರ್ ಆಚಾರ್ಯ ಕುತ್ಯಾರು, ಗಾಯತ್ರಿ ಜಿ.ಆಚಾರ್ಯ ಮಂಗಳೂರು, ಯಜ್ಞೇಶ್ವರ ಆಚಾರ್ಯ ಕುತ್ಯಾರು, ಯೋಗೀಶ್ ಆಚಾರ್ಯ ಕರಂಬಳ್ಳಿ, ಗುರುರಾಜ್ ಆಚಾರ್ಯ ಮಂಗಳೂರು, ವಸಂತ ಆಚಾರ್ಯ ಮಜೂರು, ಸತೀಶ್ ಆಚಾರ್ಯ ಸುರುಳಿ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದ ಘೋಷ ನಡೆಯಿತು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿ ಪ್ರಸ್ತಾವೆನೆಗೈದರು. ಮಹಾಸಂಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಅವರು ಅಭಿನಂದಿತರ ವಿವಿರಗಳನ್ನು ವಾಚಿಸಿದರು. ಕಾರ್ಯದರ್ಶಿ ನ್ಯಾಯವಾದಿ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿಟ್ಟೆ ಸುರೇಶ ಆಚಾರ್ಯ ವಂದಿಸಿದರು.
