ಬೀದಿ ಬದಿ ವ್ಯಾಪಾರಿಗಳ ಯೂನಿಯನ್ ಸಿ ಐ ಟಿ ಯು ಹೊಸಂಗಡಿ ಯೂನಿಟ್ | ಗುರುತುಚೀಟಿ ಕಾರ್ಡ್ ವಿತರಣೆ ಹಾಗೂ ಕ್ಷೇಮ ನಿಧಿ ಪುಸ್ತಕ ವಿತರಣೆ
September 28, 2021
0
ಮಂಜೇಶ್ವರ:- ಬೀದಿ ಬದಿ ವ್ಯಾಪಾರಿಗಳ ಯೂನಿಯನ್ C I T U ಹೊಸಂಗಡಿ ಯೂನಿಟ್ ನ ಗುರುತುಚೀಟಿ ಕಾರ್ಡ್ ವಿತರಣೆ ಹಾಗೂ ಕ್ಷೇಮ ನಿಧಿ ಪುಸ್ತಕ ವಿತರಣೆ ಕಾರ್ಯಕ್ರಮ ಇಂದು ಅಪರಾಹ್ನ ಹೊಸಂಗಡಿಯ ಎ.ಕೆ ಜಿ ಮಂದಿರದಲ್ಲಿ ನಡೆಯಿತು. ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಮಲಾಕ್ಷ ಡಿ. ಯವರು ಗುರುತುಚೀಟಿಯನ್ನ ಹಾಗೂ ಕ್ಷೇಮ ನಿಧಿ ಪುಸ್ತಕವನ್ನ ರಾಜನ್ ಎ.ಪಿ ಮಂಜೇಶ್ವರ ಇವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳ ಜಿಲ್ಲಾ ಕಾರ್ಯದರ್ಶಿ ದಿನೇಶ್ ಎಂ.ಆರ್ ನಿರ್ವಹಿಸಿದರು. ಸಿ.ಐ.ಟಿ.ಯು ನೇತಾರ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ರಾಜನ್ ಎ ಪಿ ಸ್ವಾಗತಿಸಿದರು.
Tags
