ವರ್ಕಾಡಿ:- ಸಿ.ಪಿ.ಎಂ ನ ಸಮ್ಮೇಳನದ ಭಾಗವಾಗಿ ಕೊಡ್ಲಮೊಗರು ಲೋಕಲ್ ನ ವಿವಿಧೆಡೆ ಅಳವಡಿಸಲಾಗಿದ್ದ ಪಕ್ಷದ ಬ್ಯಾನರ್ ಮತ್ತು ಧ್ವಜವನ್ನು ನಾಶ ಗೊಳಿಸಿದ ಕಿಡಿಗೇಡಿಗಳ ದುಸ್ಕೃತ್ಯವನ್ನು ಖಂಡಿಸಿ ದೈಗೋಳಿಯಲ್ಲಿ ಇಂದು ಸಂಜೆ CPI(M) ನಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿ.ಪಿ.ಎಂ ಜಿಲ್ಲಾ ಕಮಿಟಿ ಸದಸ್ಯರಾದ K.R ಜಯಾನಂದ ಉದ್ಗಾಟಿಸಿ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಏರಿಯಾ ಕಮಿಟಿ ಸದಸ್ಯ ಕೆ.ಚಂದ್ರಹಾಸ ಶೆಟ್ಟಿ ವಹಿಸಿದರು. ಸಿ.ಪಿ.ಎಂ ಏರಿಯಾ ಕಮಿಟಿ ಸದಸ್ಯರುಗಳಾದ ಗೀತಾ .ವಿ ಸಾಮಾನಿ, ಭಾರತಿ ಸುಳ್ಯಮೆ (ಅಧ್ಯಕ್ಷೆ ವರ್ಕಾಡಿ ಗ್ರಾಮ ಪಂಚಾಯತ್ ), ನವೀನ ಕುಮಾರ್ ತಚ್ಚಿರೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞಿ ಮತ್ತು DYFI ನೇತಾರ ಅಶ್ರಫ್ ಬಾಕ್ರಬೈಲು ಮುಂತಾದವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ಏರಿಯಾ ಕಮಿಟಿ ಸದಸ್ಯರೂ, ಕೊಡ್ಲಮೊಗರು ಲೋಕಲ್ ಕಮಿಟಿ ಸೆಕ್ರೆಟರಿಯಾದ ಡಿ.ಬೂಬ ಸ್ವಾಗತಿಸಿದರು. ಪಕ್ಷದ ಲೋಕಲ್ ಕಮಿಟಿ ಸದಸ್ಯರುಗಳು, ಬ್ರಾಂಚ್ ಸದಸ್ಯರುಗಳು, ಹಾಗೂ ಅಭಿಮಾನಿಗಳು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರತಿಭಟನೆಯ ನಂತರ ಮೆರವಣಿಗೆಯಲ್ಲಿ ತೆರಳಿ ದೈಗೋಳಿಯ ಹೃದಯ ಭಾಗದಲ್ಲಿ ಪಕ್ಷದ ಪತಾಕೆ ಏರಿಸಲಾಯಿತು.
