ವರ್ತಮಾನ ಕಾಲದಲ್ಲಿ ಕಾಯಕ ಮತ್ತು ವ್ಯಕ್ತಿತ್ವಗಳಿಂದ ಪ್ರಭಾವಿಯಾಗಿ ಅಸ್ತಿತ್ವವಿದ್ದ ಸಪ್ತಭಾಷಾ ಸಂಗಮ ಭೂಮಿಯಾಗಿದ್ದಂತಹ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳವನ್ನು ಕಲಿತ್ತಿದ್ದರೂ ಕನ್ನಡದಲ್ಲಿ ನಿರರ್ಗಳ ವಾಗಿ ಮಾತನಾಡಬಲ್ಲ ಹಾಗೂ ಬರೆಯಬಲ್ಲ ಓರ್ವ ಅಪರೂಪದ ಸರಕಾರಿ ಅಧಿಕಾರಿ ಶ್ರೀಯುತ ರೋಬಿನ್ ಡಿ ಸಿಲ್ವಾ, ಒಬ್ಬ ಸರಕಾರಿ ಅಧಿಕಾರಿಯಾಗಿ ಪ್ರಕೃತ ತಮ್ಮೊಂದಿಗೆ ಕೆಲಸಮಾಡುತ್ತಿರುವ ಇತರ ಅಧಿಕಾರಿಗಳೊಂದಿಗೆ ಹಾಗೂ ಸರಕಾರಿ ಸೇವೆಯನ್ನು ಪಡೆದು ಕೊಳ್ಳುವರೆ ತಮ್ಮ ಕಛೇರಿಗೆ ಬರುವಂತಹ ಸಾಮಾನ್ಯರಿಂದ ಶ್ರೀಮಂತ ವರ್ಗದ ಜನರಿಗೆ ತಮ್ಮ ಸರಳ ಸ್ವಾಭಾವಿಕ ವ್ಯಕ್ತಿತ್ವಗಳಿಂದ ಅಪರಿಚಿತರನ್ನು ಸೆಳೆದು ಬಂದವರ ಮನ ನೋಯದಂತೆ ಅವರವರ ಸರಕಾರಿ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ ನಿರ್ವಹಿಸಿಕೊಡುವಂತಹ ಏಕಮೇವಾದ್ವಿತೀಯ ವ್ಯಕ್ತಿ ಸನ್ಮಾನ್ಯರಾದಂತಹ ಉಪನೊಂಧಾವಣಿ ಅಧಿಕಾರಿ ಮಂಜೇಶ್ವರ (Sub Registrar) ಶ್ರೀ ಲೋಬಿನ್ ಡಿ ಸಿಲ್ವಾ ರವರು, ಇಂದು(ತಾ.30.09.2021 ಗುರುವಾರ) ನಿರಂತರವಾದಂತಹ 25 ವರ್ಷಗಳ ಸರಕಾರಿ ಸೇವೆಯಿಂದ ನಿವೃತ್ತರಾಗುತ್ತಿರುವ ಶ್ರೀಯುತ ರೋಬಿನ್ ಡಿ ಸಿಲ್ವಾರವರು ಒಬ್ಬ ಆದರಣೀಯ ವ್ಯಕ್ತಿ, ಶ್ರೀಯುತರವರು ವಿಲ್ಯಂ ಡಿ ಸಿಲ್ವಾ ಮತ್ತು ಜೈನ್ ಡಿ ಸಿಲ್ವಾ ರವರ ಸುಪುತ್ರ ರಾಗಿದ್ದು 19.08.1996ರಲ್ಲಿ ಸರಕಾರಿ ಸೇವೆಗೆ ಪಾದಾರ್ಪಣೆ ಗೈದು ಭಡ್ತಿಯನ್ನು ಹೊಂದುತ್ತಾ ಇದೀಗ ಉಪನೊಂದಾವಣಿ ಅಧಿಕಾರಿಯಾಗಿ ಸರಕಾರಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಹೆಚ್ಚಿನ ಎಲ್ಲಾ ಉಪನೊಂದಾವಣಿ ಕಛೇರಿ, ಜಿಲ್ಲಾ ನೊಂದಾವಣಿ ಕಛೇರಿಯಲ್ಲಿ ಕಾರ್ಯಪ್ರವೃತ್ತರಾಗಿದ್ದರು.
ಶ್ರೀಯುತರು ಮಂಜೇಶ್ವರ ಕಛೇರಿಗೆ ಬಂದಾಗ ನೂರಾರು ವರ್ಷಗಳ ಹಳೆಯ ಕಟ್ಟಡದಲ್ಲಿ ಸಹವರ್ತಿಗಳೊಂದಿಗೆ ಕಾರ್ಯಪ್ರವೃತ್ತರಾಗಿದ್ದರು. ಸರಕಾರದ ವಿಶೇಷ ಮುತುವರ್ಜಿಯಿಂದ ಈ ಕಟ್ಟಡವು ಮಂಜೇಶ್ವರದಲ್ಲಿ ಮುಂದುವರಿಯಬೇಕೆಂಬ ಪ್ರಬಲವಾದ ಹಂಬಲದಿಂದ ಹೊಸ ಕಟ್ಟಡವನ್ನು ನಿರ್ಮಿಸುವರೆ ಸರಕಾರದೊಂದಿಗೆ ಕೈ ಜೋಡಿಸಿ ಕಾರ್ಯಪ್ರವೃತ್ತರಾಗಿ ಅತ್ಯಲ್ಪ ಕಾಲದಲ್ಲಿ ಭವ್ಯವಾದ ಕಟ್ಟಡವನ್ನು ನಿರ್ಮಿಸುವುದಕ್ಕೆ ಸರಕಾರದೊಂದಿಗೆ ಕೈ ಜೋಡಿಸಿ ಕಾರ್ಯ ತತ್ಪರರಾದಂತಹ ಧೀಮಂತ ವ್ಯಕ್ತಿ.
ಈ ಹೊಸ ಕಟ್ಟಡದೊಂದಿಗೆ ಸಕಲ ಸೌಲಭ್ಯಗಳೊಂದಿಗೆ ಕಛೇರಿಗೆ ಬರುವಂತಹ ಎಲ್ಲಾ ಪ್ರಜಾ ಜನರಿಗೆ ಮರದಡಿಯಲ್ಲಿ ಬಿಸಿಲುಕಾಗಿ ನಿಲ್ಲದಂತೆ ಆರಾಮದಲ್ಲಿ ಕಟ್ಟಡದ ಮುಂಭಾಗದಲ್ಲಿ ಕುಳಿತು ಕೊಳ್ಳುವುದಕ್ಕೆ ಸೌಲಭ್ಯವನ್ನು ಒದಗಿಸಿಕೊಟ್ಟಂತಹ ಸರಕಾರವನ್ನು ಸದಾ ನೆನವರಿಸುತ್ತ ಪ್ರಕೃತ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯತತ್ಪರರಾಗಿರುತ್ತಾರೆ. ಪ್ರಕೃತ ಸರಕಾರಿ ಸೇವೆಯನ್ನು ಬಯಸಿ ಬರುವಂತಹ ಪ್ರತಿಯೊಬ್ಬ ವ್ಯಕ್ತಿಗೆ ಕೂಡ ಸರಕಾರಿ ಸೇವೆಯನ್ನು ಒದಗಿಸುವ ಒಬ್ಬ ಜನಾಧರಣೀಯ ವ್ಯಕ್ತಿಯಾಗಿದ್ದಾರೆ ರೋಬಿನ್ ಡಿ ಸಿಲ್ವಾರವರು, "ಬದುಕಿದರೆ ಹೀಗೇ ಬದುಕಬೇಕು ಚೆಲುವು, ಪರಿಮಳ, ನೆರಳು, ಹಣ್ಣು ನೀಡುವ ವನಸುಮ” ವೃಕ್ಷವಾಗಿ ಎಂಬಂತಹ ನಿಲುವಿನಲ್ಲಿ ಧೃಡವಾಗಿ ನಿಲ್ಲುವಂತಹ ಒಬ್ಬ ಅಭಿನಂದನಾರ್ಹ ವ್ಯಕ್ತಿ.
ತನ್ನ ಸರಳವಾದ ಮಾತುಗಳಿಂದ ಕಛೇರಿಗೆ ಬರುವ ಯಾವುದೇ ವ್ಯಕ್ತಿಗಳಿಗೆ ಒಂದಿನಿತು ನೋವಾಗದಂತೆ ಮಾರ್ಗದರ್ಶಕರಾಗಿ ತಮ್ಮ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಸರಕಾರಿ ಸೇವೆಯೊಂದಿಗೆ ತಮ್ಮ ಸಮಯವಾದ ತಕ್ಷಣ ಎದ್ದು ಹೋಗುವಂತಹ ವ್ಯಕ್ತಿಯಲ್ಲ. ಕಛೇರಿಗೆ ಬರುವಂತಹ ವ್ಯಕ್ತಿಗಳಿಗೆ ಅವರ ಎಲ್ಲಾ ಕೆಲಸಗಳನ್ನು ಮುಗಿಸಿಕೊಟ್ಟ ನಂತರವೆ ತಮ್ಮ ಸ್ಥಾನದಿಂದ ಹೊರಡುವಂತಹ ವ್ಯಕ್ತಿ. ತಮ್ಮ ಸರಕಾರಿ ಸೇವೆಯೊಂದಿಗೆ ತಮ್ಮ ಕಛೇರಿಯ ಆವರಣದಲ್ಲಿ ಬೆಳೆಸಿದಂತಹ ಕೃಷಿಗಳನ್ನು ಹಾಗೂ ಹೂದೋಟವನ್ನು ನಿರ್ಮಿಸಿ ಬರುವಂತಹ ಸಾರ್ವಜನಿಕರ ಕಣ್ಮನಗಳನ್ನು ಸೆಳೆಯುವಂತಹ ನಂದನವನವನ್ನಾಗಿಸಿ ಪರಿಸರ ಪ್ರೇಮಿ ಹಾಗೂ ಕೃಷಿಯಲ್ಲಿರುವಂತಹ ತಮ್ಮ ಅನನ್ಯವಾಗಿರುವಂತಹ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಟ್ಟಂತಹ ಒಬ್ಬ ಆತ್ಮೀಯ ಹಸಿರು ಪ್ರೇಮಿ. ಈ ಹಸಿರು ಪ್ರೇಮಾಂಕುರಣ ಒಂದು ಸರಕಾರಿ ನೌಕರನಿಗೆ ಇರುವಂತಹದ್ದು ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ, ಈ ವಿವರಣೆಯನ್ನು ಕಣ್ಣಾರೆ ಕಂಡು ಸಂತೋಷಿಸಬೇಕು ವಿನಃ ಕಾಗದದಲ್ಲಿ ವರ್ಣಿಸುವುದು ಅಸದಳ. ತನ್ನ ಮನೆಯಲ್ಲಿ ಇರುವಂತಹ ತ್ಯಾಜ್ಯ ವಸ್ತುಗಳನ್ನು ಸಾವಯುವ ಗೊಬ್ಬರವಾಗಿ ಪರಿವರ್ತಿಸಿ ಸಸ್ಯಗಳಿಗೆ ಉಣಿಸುವಂತಹ ಆ ನಿಷ್ಠೆಯನ್ನು ಕಂಡರೆ ಯಾರೂ ಪುಳಕಿತರಾಗದೆ ಇರಲಾರರು. ತನ್ನ ಮನೆಯಲ್ಲಿ ಕೂಡ ತಮ್ಮ ಪತ್ನಿ ಹಝಲ್ ಡಿ ಸಿಲ್ವಾರೊಂದಿಗೆ ಸಾಕು ಪ್ರಾಣಿಗಳನ್ನು ಸಾಕಿಕೊಂಡು ಮನೆಯ ಪರಿಸರವನ್ನು ಹೂದೋಟ ಹಾಗೂ ಕೃಷಿಯ ನಂದನವನವನ್ನಾಗಿಸಿ ಅದರಲ್ಲಿ ಸಂತೃಪ್ತಿಯನ್ನು ಪಡೆಯುವಂತಹ ವ್ಯಕ್ತಿ. ಒಬ್ಬ ಜೀವನದಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾಗುತ್ತಿದ್ದರೂ ಸಂತೃಪ್ತಿಯ ಜೀವನವನ್ನು ಹೊಂದಿ ಕೃಷಿಯೇ, ಸಾಕುಪ್ರಾಣಿಗಳೇ ತಮ್ಮ ಬದುಕಿನ ಸ್ಪೂರ್ತಿ ಎಂದು ಕನಸಿನ ಪಥದಲ್ಲಿ ಮುನ್ನಡೆಯುತ್ತೇವೆ ಎಂಬ ಭರವಸೆಯ ಸಂತೃಪ್ತಿ ಇವರನ್ನು ಮಾತಾನಾಡಿಸಿದಾಗ ಎದ್ದು ಕಾಣುತ್ತದೆ.
ತಮ್ಮ ಎಲ್ಲಾ ಸಿಬ್ಬಂದಿ ವರ್ಗದವರನ್ನು ಹಾಗೂ ಸಾರ್ವಜನಿಕರನ್ನು ಪ್ರೀತಿ ಗೌರವಗಳಿಂದ ಕಂಡು ವಿನೀತ ಸಜ್ಜನಿಕೆಗೆ ಪ್ರೀತಿಯ ಋಣ ಸಲ್ಲಿಸಿದ್ದಾರೆ. ಇವರು ತಮ್ಮ ಮುಂದಿನ ನಿವೃತ್ತ ಜೀವನವನ್ನು ಬಂದು ಮಿಶ್ರಾದಿ ಕುಟುಂಬದ ಜೊತೆಗೆ ಸ್ನೇಹ ಜೀವಿಯಾಗಿದ್ದು ಸಕಲ ಐಶ್ವರ್ಯಾ ಸಕಲ ಸಂಪದದಿಂದ ಬಾಳುವಂತೆ ಪರಮಾತ್ಮನು ಅನುಗ್ರಹಿಸಲಿ ಎಂಬುದಾಗಿ ಪ್ರಾರ್ಥಿಸುವ..
ಮಂಜೇಶ್ವರದ ಸಾರ್ವಜನಿಕರು.
