ಕಾಸರಗೋಡು:- ನಗರದ ನುಳ್ಳಿಪ್ಪಾಡಿ ಪಿ.ಎಂ.ಎಸ್ ರಸ್ತೆ ನಿವಾಸಿ, ಹಿರಿಯ ನ್ಯಾಯವಾದಿ, ಬಿಜೆಪಿ ಪಕ್ಷದ ಹಿರಿಯ ಮುಖಂಡ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಜೈಲುಕಾಲ ಅನುಭವಿಸಿದ ನ್ಯಾಯವಾದಿ ಕೆ. ಸುಂದರ ರಾವ್ (88) ರವರು ವಯೋಸಹಜದಿಂದ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಪ್ರೇಮ ಕುಮಾರಿ, ಮಕ್ಕಳಾದ ಪ್ರಶಾಂತ್, ಕಿರಣ್ ಚಂದ್ರ, ಕಿಶೋರ್ ಕುಮಾರ್, ಶಾಲಿನಿ, ಎಂಬಿವರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ:- ಕನ್ನಡ ಜಾಗೃತಿ ಸಮಿತಿ ಕಾಸರಗೋಡು, ರಮಾನಾಥ ಸಾಂಸ್ಕೃತಿಕ ಭವನ ಸಮಿತಿ ಕೋಟೆಕಣಿ ಕಾಸರಗೋಡು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು, ಬಿಜೆಪಿ, ಯುವಮೋರ್ಚಾ, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಕಾಸರಗೋಡು, ಸಂಘ ಪರಿವಾರ ಕಾಸರಗೋಡು ಗಾಢವಾದ ಸಂತಾಪ ಸೂಚಿಸಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ
