ತಲಪಾಡಿ: ಕಾಸರಗೋಡು ಜಿಲ್ಲೆಯ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ "ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಇಲ್ಲದೇ ಪ್ರಯಾಣಿಸಬಹುದು., ಅಂತಹ ಎಲ್ಲಾ ನಿಯಮಗಳನ್ನು ತೆಗೆದುಹಾಕಲಾಗಿದೆ., ಯಾವುದೇ ತಪಾಸಣಾ ಕೇಂದ್ರಗಳು ಇಲ್ಲ ಎಲ್ಲವನ್ನೂ ತೆಗೆದುಹಾಕಲಾಗಿದೆ. ಎಂಬ ಸಂದೇಶಗಳು ಹರಿದಾಡುತ್ತಿದ್ದು", ಈ ಬಗ್ಗೆ ಕೆಲವು ಪತ್ರಕರ್ತರಿಗೆ ಹಲವಾರು ಫೋನ್ ಕರೆಗಳು ಬರ ತೊಡಗಿವೆ. ಈ ನಿಟ್ಟಿನಲ್ಲಿ ತಲಪಾಡಿಯಲ್ಲಿರುವ ತಪಾಸಣಾ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಮಾಹಿತಿ ಶುದ್ಧ ಸುಳ್ಳು. ಅಂತಹ ಯಾವುದೇ ಮಾಹಿತಿಯು ನಮಗೆ ಲಭಿಸಿಲ್ಲ, ಅಂತಹ ಯಾವುದೇ ಸೂಚನೆಯನ್ನು ಜಿಲ್ಲಾಧಿಕಾರಿಗಳು ನೀಡಿಲ್ಲ, ಜಿಲ್ಲಾಧಿಕಾರಿಯವರು ಯಾವುದೇ ಸೂಚನೆಯನ್ನು ನೀಡದೆ ಇಲ್ಲಿನ ತಪಾಸಣಾ ಕೇಂದ್ರವನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಆದರಿಂದ ಪ್ರಸ್ತುತ ಈಗಿನ ನಿಯಮದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಪ್ರಯಾಣಿಕರು ಕಡ್ಡಾಯವಾಗಿ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರಬೇಕು. ಎಂದು ಮಂಜುಶ್ರೀ ನ್ಯೂಸ್ಗೆ ಸ್ಪಷ್ಟೀಕರಣ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ತೋರಿಸಿಯೇ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಬೇಕಾಗಿದೆ. ಕೆಲವು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಕಲಿ ನೆಗೆಟಿವ್ ಪ್ರಮಾಣ ಪತ್ರವನ್ನು ತಯಾರಿಸಿ ಸಂಚರಿಸುವುದು ಗಮನಕ್ಕೆ ಬಂದಿದ್ದು ಇನ್ನು ಮುಂದೆ ಇಲ್ಲಿ ಸೂಕ್ತವಾದ ಸ್ಕ್ಯಾನರ್ನ ವ್ಯವಸ್ಥೆಯನ್ನು ಅಳವಡಿಸಲಾಗುವುದೆಂದು ಅಧಿಕೃತ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ನಕಲಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದ ನಾಲ್ವರನ್ನು ಬಂಧಿಸಿ ಕೇಸು ದಾಖಲಿಸಲಾಗಿದ್ದು ಇನ್ನು ಮುಂದೆಯೂ ನಕಲಿ ಪ್ರಮಾಣ ಪತ್ರದೊಂದಿಗೆ ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುಶ್ರೀ ನ್ಯೂಸ್ಗೆ ತಿಳಿಸಿದ್ದಾರೆ. ಅಲ್ಲದೇ ಕೋವಿಡ್ ಲಸಿಕೆಯ ಪ್ರಮಾಣ ಪತ್ರ ಹೊಂದಿದ್ದರೆ ಸಾಲದು, ಆರ್.ಟಿ ಪಿ.ಸಿ.ಆರ್ ನೆಗಟಿವ್ ವರದಿ ಕಡ್ಡಾಯವಾಗಿ ಪ್ರಯಾಣಿಸುವಾಗ ಜತೆಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್.ಟಿ.ಪಿ.ಸಿ.ಆರ್ ನಕಲಿ ವರದಿ ಜೊತೆ ಇನ್ನು ಮುಂದೆ ತಲಪಾಡಿ ಗಡಿ ದಾಟಲು ಯತ್ನಿಸಿದರೆ ಅಂತವರನ್ನ ಬಂಧಿಸಿ, ಕೇಸು ದಾಖಲಿಸಲಾಗುವುದೆಂದು ಅಧಿಕಾರಿಗಳು ತೀರ್ಮಾನಿಸುತ್ತಾರೆ. ಇದೀಗ ರಾತ್ರಿ ವೇಳೆಯಲ್ಲೂ ಕೂಡಾ ಪೊಲೀಸ್ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದು, ಇನ್ನು ಮುಂದೆ ಈ ಪ್ರಕ್ರಿಯೆ ಎಂದಿನಂತೆ ನಡೆಯಲಿದೆ.
ವರದಿ ಮತ್ತು ಚಿತ್ರ : ರತನ್ ಕುಮಾರ್ ಹೊಸಂಗಡಿ
