ಮಂಜೇಶ್ವರ:- ಶಾಂತಿಸೇನಾ ಫೌಂಡೇಶನ್ (ರಿ.) ಇದರ ವತಿಯಿಂದ ವರ್ಕಾಡಿಯಲ್ಲಿ ಜರುಗಿದ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಪುಷ್ಪಾರ್ಚನೆಗೈದರು. ಶಾಂತಿಸೇನಾ ಫೌಂಡೇಶನ್ ಸಂಚಾಲಕ ಹರ್ಷಾದ್ ವರ್ಕಾಡಿ, ಟ್ರಸ್ಟಿಗಳಾದ ದಿವಾಕರ್ ಎಸ್ ಜೆ, ಉಮ್ಮರ್ ಬೋರ್ಕಳ, ಮುಖಂಡರಾದ ಮುಹಮ್ಮದ್ ಮಜಾಲ್, ಆಸೀಸ್ ಕಲ್ಲೂರು, ಸದಾಶಿವ ಕೆ, ರಜತ್ ವೇಗಸ್, ಫ್ರಾನ್ಸಿಸ್ ಡಿಸೋಜಾ, ಶರೀಫ್ ಅರಿಬೈಲು, ಮೂಸಾ ಧರ್ಮನಗರ, ಗಂಗಾಧರ ಕೆ ಎಸ್, ವಸಂತರಾಜ ಶೆಟ್ಟಿ, ರಾಜೇಶ್ ಡಿ ಸೋಜಾ, ಮೊಹಮ್ಮದ್ ಕೆದಂಬಾಡಿ, ಮುಂತಾದವರು ಉಪಸ್ಥಿತರಿದ್ದರು.
ಮೀಯಪದವಿನಲ್ಲಿ ಗಾಂಧಿ ಸ್ಮೃತಿ ಯಾತ್ರೆ
ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮೀಯಪದವಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಯಾತ್ರೆ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ ಅಡಪ ಸಂಕಬೈಲು ಅಧ್ಯಕ್ಷತೆಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಮೀಯಪದವು ಚರ್ಚ್ ಪರಿಸರದಿಂದ ಜಂಕ್ಷನ್ ತನಕ ನಡೆದ ಯಾತ್ರೆಯಲ್ಲಿ ಕಾಂಗ್ರೆಸ್ ನೇತಾರರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.