ನವರಾತ್ರಿಯ ನವದುರ್ಗೆಯರಲ್ಲಿ ಒಂಬತ್ತನೆಯ
ದೇವಿ ಸಕಲ ಸಿದ್ಧಿಗಳನ್ನು ದಯಪಾಲಿಸುವ ಕೊನೆಯ ದೇವಿ ಮಾತೆ #ಸಿದ್ಧಿಧಾತ್ರಿ.
ಹೆಸರೇ ಸೂಚಿಸುವಂತೆ ಸಿದ್ಧುಧಾತ್ರಿ ಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು. ಈ ದೇವಿಯು ಕಮಲದ ಮೇಲೆ ಕುಳಿತಿದ್ದು,ಶಂಖ ಚಕ್ರ ಗಧಾ ಪದ್ಮ ಧಾರಿಣಿ ಯಾಗಿ ಕಾಣುತ್ತಾಳೆ. ಗಂಧರ್ವ,ಯಕ್ಷ, ಸಿದ್ಧ,ಅಸುರ
ದೇವತೆಯರೆಲ್ಲರೂ ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಶಿವನು ಈಕೆಯನ್ನು ಪೂಜಿಸಿ ಸಿದ್ಧಿಗಳನ್ನು ಪಡೆದನು ಎಂಬ ಉಲ್ಲೇಖವಿದೆ.
ಈ ದೇವಿಯ ಉಪಾಸನೆಯಿಂದ ಅಷ್ಟ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಈ ದೇವಿಯನ್ನು ಪೂಜಿಸಿದರೆ ರಕ್ಷಣೆ ಸಿಗುತ್ತದೆ. ಸರ್ವಕಾರ್ಯಗಳಲ್ಲಿ ವಿಜಯ ದೊರಕಿಸುವ ಸಾಮರ್ಥ್ಯ ಕರುಣಿಸುತ್ತಾಳೆ. ದುಃಖವನ್ನು ದೂರ ಮಾಡುತ್ತಾಳೆ. ಈ ಮಹಾತಾಯಿಯ ಭಕ್ತರಿಗೆ ಸುಖ ಭೋಗಾದಿಗಳನ್ನು ನೀಡಿ ಮೋಕ್ಷವನ್ನು ದಯಪಾಲಿಸುವ ಶಕ್ತಿ ದೇವತೆ ಈ ಮಾತೆ ಸಿದ್ದಿಧಾತ್ರಿ.
ನವದುರ್ಗೆಯರನ್ನು ಪೂಜಿಸುವ ಪದ್ಧತಿ ಅತ್ಯಂತ ವಿಶೇಷ ೯ ದಿನಗಳ ಕಾಲ ೯ದೇವಿಯರ ಪೂಜೆಯನ್ನು ನಿಷ್ಠೆಯಿಂದ ಮಾಡಿದರೆ ಯಶಸ್ಸು ಸಿಗುವುದು ಖಚಿತ.
ಮಹಾನ್ ಶಕ್ತಿ ಸ್ವರೂಪಿಣಿಯರ ಆಶೀರ್ವಾದ ನಮ್ಮ ಮೇಲೆ ಇದ್ದರೆ, ಜೀವನದಲ್ಲಿ ಕಷ್ಟಗಳು ಬರುವುದಿಲ್ಲ, ಶತೃಗಳ ಭಯ ಇರುವುದಿಲ್ಲ, ಎಲ್ಲವನ್ನೂ ಕರುಣಿಸುವ
ಹಾಗೂ ಸಾಧನೆಗೆ ಬೇಕಾದ ಶಕ್ತಿ ದೊರೆಯುತ್ತದೆ.
ಸಿದ್ದಿಧಾತ್ರಿ ದೇವಿಯ ಸ್ತುತಿ ಯಾ ಸರ್ವಭೂತೇಶು ಸಿದ್ದಿಧಾತ್ರಿ ರೂಪೇಣು ಸಂಸ್ಥಿತಾ..
ನಮಸ್ತೈ ನಮಸ್ತೈ ನಮಸ್ತೈ ನಮೋ ನಮಃ..
💐🌹💮🌺🌷⚘🥀🌼🌸🙏🙏
ಬನ್ನಿ ಬಂಗಾರವಾಗಲಿ
ಬಾಳು ಸಿಹಿಯಾಗಿರಲಿ
ಪ್ರೀತಿ ಪವಿತ್ರವಾಗಿರಲಿ
ಸ್ನೇಹ ಚಿರಕಾಲವಿರಲಿ
ವಿಜಯ ದಶಮಿ ಹಬ್ಬದ ಶುಭಾಶಯಗಳು..💐💐
ಲೇಖನ ಮತ್ತು ಸಂಗ್ರಹ : ಶ್ರೀ ಬೆಂಗಳೂರು
