ಮಂಜುಶ್ರೀ ನ್ಯೂಸ್ ಮಂಜೇಶ್ವರ
ನಮ್ಮ ಪ್ರತಿನಿಧಿ / ವರದಿ
ಮಂಜೇಶ್ವರ:- ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಹಿಂದೂ ಗಳ ಸರಣಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಜೇಶ್ವರ ಖಂಡ ಸಮಿತಿ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ಇಂದು ರಾತ್ರಿ ಬೃಹತ್ ಪ್ರತಿಭಟನೆ ನಡೆಯಿತು.
ಹೊಸಂಗಡಿ ಪ್ರೇರಣಾ ಕಾರ್ಯಾಲಯದಿಂದ ಹೊಸಂಗಡಿ ಜಂಕ್ಷನ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಪಾಕಿಸ್ತಾನದ ಧ್ವಜವನ್ನು ಬೆಂಕಿ ಹಚ್ಚಿ ಸುಡುವ ಮೂಲಕ ಕಾಶ್ಮೀರದ ಹಿಂದೂ ಜನತೆಗೆ ವಿಶ್ವ ಹಿಂದೂ ಪರಿಷತ್ ಸದಾ ಜತೆಗಿರುತ್ತದೆ ಎಂಬ ವಿಶ್ವಾಸವನ್ನ ತೊರ್ಪಡಿಸಿದರು.
ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಬಿಜೆಪಿ ನೇತಾರರಾದ ವಿಜಯ ಕುಮಾರ್ ರೈ ಪರಂಕಿಲ ಹಾಗೂ ಯಾದವ ಬಡಾಜೆ ಮಾತಾಡಿದರು. ವಿಶ್ವ ಹಿಂದೂ ಪರಿಷತ್ ಪಧಾಧಿಕಾರಿಗಳಾದ ಯಾದವ ಕೀರ್ತೇಶ್ವರ ಸ್ವಾಗತಿಸಿ, ಸೇವಾ ಪ್ರಮುಖ್ ಸುರೇಶ್ ಶೆಟ್ಟಿ ಪರಂಕಿಲ ವಂದಿಸಿದರು. ಪ್ರತಿಭಟನಾ ಮೆರವಣಿಗೆಗೆ ವಿಶ್ವ ಹಿಂದೂ ಪರಿಷತ್ ನೇತಾರರಾದ ಶೈಲೇಶ್ ಅಂಜರೆ, ಪವನ್ ಹೊಸಂಗಡಿ, ಜನಾರ್ಧನ ಆಚಾರ್ಯ ಮಜಿಬೈಲ್, ಸುಧೀನ್ ಕರ್ಕೇರ ಇಡಿಯ, ಕೌಶಿಕ್ ಮಾಡ. ಅನಿಲ್ ಅಂಜರೆ, ಮಿಥುನ್, ಮೊದಲಾದವರು ನೇತೃತ್ವ ನೀಡಿದರು. ಪ್ರತಿಭಟನೆಯಲ್ಲಿ ವಿ.ಎಚ್.ಪಿ, ಭಜರಂಗದಳ ಹಾಗೂ ಸಂಘ ಪರಿವಾರದ ಹಲವಾರು ನೇತಾರರು ಉಪಸ್ಥಿತರಿದ್ದರು.
