ಈ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿದೆ.,
ಅಂದರೆ ಅದರ ಶ್ರೇಯಸ್ಸು ಹಳೆಯ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ ಎಂದು ಬಂಗ್ರ ಮಂಜೇಶ್ವರ ಸರಕಾರಿ ಹೆೃಯರ್ ಸೆಕೆಂಡರಿ ಶಾಲೆಯ ಹಿರಿಯ ಅಧ್ಯಾಪಕ ಗೋವಿಂದ ಮಾಸ್ಟರ್ ಹೇಳಿದರು.
ಅವರು ನಿನ್ನೆ ಬೆಳಿಗ್ಗೆ ಮಂಜೇಶ್ವರದ I.B ರೇಸಾಟ್೯ನಲ್ಲಿ ನಡೆದ ಬಂಗ್ರ ಮಂಜೇಶ್ವರ ಸರಕಾರಿ ಶಾಲೆಯ 1998 - 1999 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಕೂಡುವಿಕೆಯ "ಸ್ನೇಹ ಸಂಗಮ - 2022" ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆಯ ಜೊತೆಗೆ ವಿನಯ, ನಮ್ಮ ಪರಿಸರ, ದೇಶದ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು.
ಇದನ್ನು ನಮ್ಮ ಶಾಲೆಯ 1998 - 99 ರ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನಾವು ಅಭಾರಿಯಾಗಿದ್ದೇವೆ.
ಅಂದು ಕಲಿಸಿದ ಗುರುಗಳನ್ನು ಮತ್ತೆ ಒಂದೂ ಗೂಡಿಸಿ ಸನ್ಮಾನಿಸಿದ ಗುರಿ ನಿಜಕ್ಕೂ ಆದರ್ಶನಿಯ,
ಇಂತಹ ವಿದ್ಯಾರ್ಥಿಗಳಿಗೆ ಅಂದು ಪಾಠ ಬೋಧಿಸಿದ ನಾವು ಇಂದು ಸಾರ್ಥಕರಾದೇವು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು 1998 - 99 ನೇ ಸಾಲಿನ ಬ್ಯಾಚ್ನ ಪ್ರಮುಖ ರೂವಾರಿ ಜಲೀಲ್ ರಾಮತ್ತಮಜಲ್ ವಹಿಸಿದ್ದರು.
ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷಣ ನೀಡಿದ ಅಧ್ಯಾಪಕರುಗಳಾದ ಗೋವಿಂದ ಮಾಸ್ಟರ್, ಪ್ರೇಮಾ ಟೀಚರ್ ವಾಮಂಜೂರು,
ಭಾಸ್ಕರ ಮಾಸ್ಟರ್, ಕೃಷ್ಣ ಮಾಸ್ಟರ್ , ಅಹ್ಮದ್ ಮಾಸ್ಟರ್, ಶಂಕರ ನಾರಾಯಣ ಪಂಡಿತ್ ಮಾಸ್ಟರ್, ರಾಮ ಮಾಸ್ಟರ್, ಮೊೃದು ಮಾಸ್ಟರ್,
ಜಯ ಪ್ರಕಾಶ್ ಮಾಸ್ಟರ್, ಬಾಬು ಮಾಸ್ಟರ್, ದಿನೇಶ್ ಮಾಸ್ಟರ್ MMTC, ಶೋಭಾ ಟೀಚರ್, ಇಂದಿರಾ ಟೀಚರ್, ಜಯಂತಿ ಟೀಚರ್, ಪ್ರೇಮ ಟೀಚರ್, ಗ್ರೇಸಿ ಟೀಚರ್, ರಮಾ ಟೀಚರ್, ಪುಷ್ಪಲತಾ ಟೀಚರ್, ಶಂಕರ ನಾರಾಯಣ ಪಂಡಿತ್ ಮಾಸ್ಟರ್,
ಇವರುಗಳನ್ನು ವಿದ್ಯಾರ್ಥಿಗಳು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿ, ಅರ್ಶಿವಾದ ಪಡೆದರು. ಹಾಗೂ
ವಿವಿಧ ಅಟೋಟ ಸ್ಪರ್ಧೆಗಳನ್ನ ಆಯೋಜಿಸಿ,
ಮನೋರಂಜನಾ ಕಾರ್ಯಕ್ರಮಗಳನ್ನ ನಡಿಸಿ ಅಧ್ಯಾಪಕ - ವಿದ್ಯಾರ್ಥಿಗಳ ಬಾಲ್ಯದ ಭಯ ಭಕ್ತಿಯ ಒಡನಾಟಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು.
ಈ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಬಂಗ್ರ ಮಂಜೇಶ್ವರದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಅಯೋಜಿಸಿದ್ದು ಇದು ಶಾಲೆಯ ಮಟ್ಟದಲ್ಲಿ ವಿಶೇಷ ಖ್ಯಾತಿಯನ್ನು ಪಡೆಯಿತು.
ದೇಶ - ವಿದೇಶಗಳಲ್ಲಿ ನೆಲೆಸಿ, ಉದ್ಯೋಗದಲ್ಲಿದ್ದವರನ್ನ ಒಟ್ಟುಗೂಡಿಸಿದ ಫೇಸ್ಬುಕ್ ಹಾಗೂ ವಾಟ್ಸಾಪ್ ಎಂಬ ಸಾಮಾಜಿಕ ಜಾಲತಾಣ ಕಲಿತ ಸಹಪಾಠಿಗಳನ್ನ ಒಂದುಗೂಡಿಸಿತು. ಈ ವೇಳೆ ಸನ್ನದ್ದರಾದ ಈ ಹಳೆವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳನ್ನ ಸ್ಮರಿಸುವ ಉದ್ದೇಶದಿಂದ "ಸ್ನೇಹ ಸಂಗಮ" ಎಂಬ ವಿಶೇಷ ಕಾರ್ಯಕ್ರಮವನ್ನ ಆಯೋಜಿಸಿ, ತಾವೆಲ್ಲರೂ ಸಂಗಮಿಸಿ, ಜತೆಗೂಡುವುದರೊಂದಿಗೆ ಅಧ್ಯಾಪಕರನ್ನ ಜತೆಗೂಡಿಸಿ ವಿಶೇಷ ಕಾರ್ಯಕ್ರಮವನ್ನ ಏರ್ಪಡಿಸಿದ್ದರು.
ಈ ಕಾರ್ಯಕ್ರಮಕ್ಕಾಗಿ ದೇಶ ವಿದೇಶಗಳಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿದ್ದ ವಿದ್ಯಾರ್ಥಿಗಳು ತಮ್ಮೆಲ್ಲಾ ಒತ್ತಡದ ಕೆಲಸವನ್ನು ಬದಿಗಿಟ್ಟು ನೇರ ಊರಿಗೆ ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಬಾಲ್ಯದ ಕಾಲವನ್ನು ನೆನೆಪಿಸಿದರು. ತಮ್ಮ ಜತೆ ಕಲಿತ ಸಹಪಾಠಿ ಮಿತ್ರರ ಜತೆ ತಮ್ಮ ವಿಶೇಷ ಅನುಭವಗಳನ್ನು ಕೂಡಾ ಹಂಚಿಕೊಂಡು ಸಂತಸ ಪಟ್ಟರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ರೀತಾ ಪುತ್ತೂರು ಪ್ರಾರ್ಥನೆ ಹಾಡಿ, ಮೋಹನ್ ಹೊಸಂಗಡಿ ಕೊಪ್ಪಳ ಸ್ವಾಗತಿಸಿ, ಶಶಿಧರ ಅರಿಬೈಲು ಕಾರ್ಯಕ್ರಮ ನಿರೂಪಿಸಿ, ಸಮೀಮ ಹೊಸಂಗಡಿ ವಂದಿಸಿದರು.
✍️ ರತನ್ ಕುಮಾರ್ ಹೊಸಂಗಡಿ.

I'm 93-94 batch
ReplyDelete