ಮಂಜೇಶ್ವರ: ನಿವೃತ್ತ ಮುಖ್ಯೋಪಾಧ್ಯಾಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗದ ಧುರೀಣರಾಗಿರುವ ಉದ್ಯಾವರ ಪೂಮಣ್ಣು ನಿವಾಸಿ ಬಾಬು ಮಾಸ್ಟರ್ (63) ಹೃದಯಾಘಾತದಿಂದ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗುವ ಹಾದಿ ಮಧ್ಯೆ ಮೃತಪಟ್ಟರು.
ಬಂಗ್ರ ಮಂಜೇಶ್ವರ ಸಸಿಹಿತ್ಲು ನಿವಾಸಿ ಕೃಷ್ಣಪ್ಪ ಎಂಬವರು ಅಸೌಖ್ಯ ನಿಮ್ಮಿತ ಇಂದು ನಿಧನರಾಗಿದ್ದರು. ಮೃತರ ಮನೆಗೆ ತೆರಳಿ ಅಪರಾಹ್ನ 1.30 ಕ್ಕೆ ಹಿಂತಿರುಗುವ ಮಧ್ಯೆ ಸಸಿಹಿತ್ಲು ಸೇತುವೆ ಬಳಿ ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಸ್ಥಳೀಯರು ಹೊಸಂಗಡಿಯ ಖಾಸಾಗಿ ಆಸ್ಪತ್ರೆ, ಬಳಿಕ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ.
ಮೃತದೇಹವನ್ನು ಮನೆಗೆ ತರಲಾಗಿದ್ದು, ಅಂತಿಮ ವಿಧಿ ವಿಧಾನಗಳ ಬಳಿಕ ಸಂಜೆ 6.00 ಕ್ಕೆ ಉದ್ಯಾವರದ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರು ಬಂಗ್ರ ಮಂಜೇಶ್ವರ ಸರಕಾರಿ ಶಾಲೆಯಲ್ಲಿ 22 ವರ್ಷಗಳ ಕಾಲ ಅಧ್ಯಾಪಕರಾಗಿದ್ದರು. ಬಳಿಕ 6 ವರ್ಷಗಳ ಕಾಲ ಕಡಂಬಾರು ಜಿ.ಎಲ್.ಪಿ. ಶಾಲೆಯಲ್ಲಿ 6 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಬಾಕುಡ ಸಮಾಜದ ಹಿರಿಯರಾಗಿದ್ದ ಇವರು ಸಮಾಜದ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಿದ್ದರು. ಭಾರತೀಯ ಜನತಾ ಪಕ್ಷದ ಮಂಜೇಶ್ವರ ಮಂಡಲ ಉಪಾಧ್ಯಕ್ಷರೂ, ಎಸ್.ಸಿ ಎಸ್.ಟಿ ಮೋರ್ಚಾದ ಮಂಜೇಶ್ವರ ಮಂಡಲ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಉದ್ಯಾವರ ಮಾಡ ಶ್ರೀ ಕೋಮಾರಯ ಚಾಮುಂಡೇಶ್ವರೀ ದೈವಸ್ಥಾನದ ಮಾಜಿ ಅಧ್ಯಕ್ಷರು, ಉದ್ಯಾವರ ಮಾಡದಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ಗೌರವಾಧ್ಯಕ್ಷರಾಗಿ ಇತ್ತೀಚೆಗೆ ನಡೆದ ಹಿಂದೂ ರುದ್ರ ಭೂಮಿ ಹೋರಾಟ ಸಮಿತಿಯ ಪ್ರಧಾನ ರೂವಾರಿಯಾಗಿದ್ದರು. ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರದ ಪ್ರಸ್ತುತ ಉಪಾಧ್ಯಕ್ಷರಾಗಿರುವರು.
ಮೃತರು ಪತ್ನಿ: ಹರಿಣಾಕ್ಷಿ, ಮಕ್ಕಳಾದ: ಅಕ್ಷತಾ, ಅಕ್ಷಿತಾ ಅಕ್ಷಯ್, ಅಳಿಯಂದಿರಾದ: ಸೆಂದಿಲ್, ರಂಜಿತ್, ಸಹೋದರ - ಸಹೋದರಿಯರಾದ: ಸುರೇಶ್, ಗಿರಿಜಾ, ಕುಸುಮ ಹಾಗೂ ಅಪಾರ ಬಂಧು - ಮಿತ್ರರನ್ನ ಅಗಲಿದ್ದಾರೆ.
