ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ ಹನ್ನೆರಡನೇ ವರ್ಷದ ವರ್ಧಂತ್ಯುತ್ಸವವು 2022ನೇ ಮೇ 25ರಂದು ಪಡುಕುತ್ಯಾರಿನಲ್ಲಿ ನಡೆಯಲಿದೆ. ಇದೇ ವೇಳೆ ಸಾಮೂಹಿಕ ಮಹಾ ಚಂಡಿಕಾಯಾಗವು ನಡೆಯಲಿದೆ.
ಅಂದು ಬೆಳಿಗ್ಗೆ ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ. ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಲಿದೆ. ನಂತರ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆಯ ಬಳಿಕ ಪಟ್ಟಾಭಿಷೇಕ ವರ್ಧಂತಿಯ ವಿಧಿ ವಿಧಾನಗಳ ನಡೆಯಲಿವೆ. ದಿನ ವಿಶ್ವಬ್ರಾಹ್ಮಣ ಸಮಾಜದ ಪಂಚಶಿಲ್ಪ ಕರಕುಶಲ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪಂಚಶಿಲ್ಪ ಕರಕುಶಲ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸುವ ಸಮಾಜ ಬಾಂಧವರು ಮೇ 22ರ ಮುಂಚಿತವಾಗಿ ಮಹಾಸಂಸ್ಥಾನವನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಬೇಕಾಗಿದೆ.
ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರ ಧರ್ಮ ಸಭೆಯಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಸಮಾರಂಭದಲ್ಲಿ ಜಗದ್ಗುರು ಕಾಳಹಸ್ತಾಚಾರ್ಯರ ಭಾವ ಚಿತ್ರ ಅನಾವರಣವು ನಡೆಯಲಿದೆ. ಜಗದ್ಗುರುಗಳವರ ಪಟ್ಟಾಭಿಷೇಕ ವರ್ಧಂತಿಯ ಅಂಗವಾಗಿ ನಡೆದ ಕ್ರೀಡಾ ಕಲೋತ್ಸವ ಸ್ಪರ್ಧಾ ವಿಜೇತರಿಗೆ ಸ್ಮರಣಿಕೆ ಪ್ರಮಾಣಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರ ವಿತರಣೆಯೂ ಇದೇ ವೇಳೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ವಿ.ಸುನಿಲ್ ಕುಮಾರ್ ಕಾರ್ಕಳ, ಶ್ರೀ ಅಂಗಾರ ಸುಳ್ಯ, ಶಾಸಕರಾದ ಶ್ರೀ ಲಾಲಾಜಿ ಮೆಂಡನ್ ಕಾಪು, ಶ್ರೀ ರಘುಪತಿ ಭಟ್ ಉಡುಪಿ, ಶ್ರೀ ಬಿ.ಸುಕುಮಾರ ಶೆಟ್ಟಿ
ಬೈಂದೂರು, ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆ, ಶ್ರಿ ಪ್ರಮೋದ್ ಮಧ್ವರಾಜ್ ಉಡುಪಿ, ಉದ್ಯಮಿಗಳಾದ ಶ್ರೀ ಬಿ.ಎನ್.ವಿ ರಾಜಶೇಖರ್ ಹೈದರಾಬಾದ್, ಶ್ರೀ ರಾಜೇಶ್ ಪಿ. ಚಿಂಚೇವಾಡಿ ಬೆಂಗಳೂರು, ಪಡುಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲತಾ ಎಸ್. ಆಚಾರ್ಯ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಹರೀಶ್ ಆಚಾರ್ಯ ಜಲಕದಕಟ್ಟೆ, ಎಸ್.ಕೆ.ಜಿ ಐ ಕೋ. ಸೊಸೈಟಿ ಅಧ್ಯಕ್ಷ ಶ್ರೀ ಉಪೇಂದ್ರ ಆಚಾರ್ಯ ಪೆರ್ಡೂರು, ಸಮಾಜ ಸೇವಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ಯಶ್ಪಾಲ್ ಸುವರ್ಣ, ಶ್ರೀ ಜಯರಾಮ ಆಚಾರ್ಯ ಕಾಪು ಭಾಗವಹಿಸುವರು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಬಾಲಚಂದ್ರ ಭಟ್ ಚಂದುಕೂಡ್ಲು, ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಆನೆಗುಂದಿ ಮೂಲ ಮಠ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಮತ್ತು ಆನೆಗುಂದಿ ಶಾಖಾ ಮಠ ಸಮಿತಿ ಬೆಂಗಳೂರು ಅಧ್ಯಕ್ಷ ಶ್ರೀ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಕರಾವಳಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಕಾಳಿಕಾಂಬಾ ದೇವಾಲಯಗಳ ಧರ್ಮದರ್ಶಿಗಳಾದ ಶ್ರೀ ಕೆ. ಕೇಶವ ಆಚಾರ್ಯ, ಮಂಗಳೂರು, ಶ್ರೀ ಶಿಲ್ಪಿ ರಾಮಚಂದ್ರ ಆಚಾರ್ಯ, ಕಾರ್ಕಳ, ಶ್ರೀ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಶ್ರೀ ಭಾಸ್ಕರ ಬಿ. ಆಚಾರ್ಯ ಭಟ್ಕಳ , ಶ್ರೀ ಪುರೋಹಿತ್ ಜಯಕರ ಆಚಾರ್ಯ ಮೂಡಬಿದ್ರೆ, ಶ್ರೀ ನವೀನ ಆಚಾರ್ಯ ಕಟಪಾಡಿ, ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶ್ರೀ ಶೇಖರ ಆಚಾರ್ಯ ಕಾಪು, ಶ್ರೀ ಕೆ. ಸುಧಾಕರ ಆಚಾರ್ಯ, ಕೊಲಕಾಡಿ, ಶ್ರೀ ಸುಂದರ ಆಚಾರ್ಯ ಕೋಟೆಕಾರು, ಶ್ರೀ ಪೋಳ್ಯ ಉಮೇಶ ಆಚಾರ್ಯ, ಬಂಗ್ರಮಂಜೇಶ್ವರ, ಶ್ರೀ ನ್ಯಾಯವಾದಿ ರಾಜೇಶ್ ಆಚಾರ್ಯ ಆರಿಕ್ಕಾಡಿ, ಶ್ರೀ ಕೆ. ಪ್ರಭಾಕರ ಆಚಾರ್ಯ ಮಧೂರು, ಶ್ರೀ ಪುರುಷೋತ್ತಮ ಆಚಾರ್ಯ ಕಾಞಂಗಾಡು, ಶ್ರೀ ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್ ಮುಂಬಯಿ, ಶ್ರೀ ಚಿಕ್ಕಣ್ಣ ಆಚಾರ್ ಬೆಂಗಳೂರು, ಶ್ರೀ ಮನೋಹರ ಲಕ್ಕುಂಡಿ ಹುಬ್ಬಳ್ಳಿ, ಶ್ರೀ ಬಿ. ಜಗದೀಶ್ ಆಚಾರ್ಯ ಪಡುಪಣಂಬೂರು ಇವರು ಭಾಗವಹಿಸುವರು.
ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರಾದ ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಶ್ರೀಟಿ. ಸುಧಾಕರ ಆಚಾರ್ಯ, ತ್ರಾಸಿ, ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಶ್ರೀ ಜಯಕರ ಆಚಾರ್ಯ ಕರಂಬಳ್ಳಿ, ಶ್ರೀ ರೂಪೇಶ್ ಆಚಾರ್ಯ ಮಂಚಕಲ್, ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಶ್ರೀ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಶ್ರೀ ಪ್ರವೀಣ ಆಚಾರ್ಯ ರಂಗನಕೆರೆ, ಶ್ರೀ ವೈ. ಧರ್ಮೇಂದ್ರ ಆಚಾರ್ಯ ನಿವೃತ್ತ ಸುಬೇದಾರ್, ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್) ಹುಬ್ಬಳ್ಳಿ , ಶ್ರೀ ಕೃಷ್ಣ ವಿ. ಆಚಾರ್ಯ ಮುಂಬಯಿ, ಶ್ರೀ ಜಿ.ಟಿ ಆಚಾರ್ಯ ಮುಂಬಯಿ, ಶ್ರೀ ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು, ಶ್ರೀ ಮೋಹನ್ ಕುಮಾರ್ ಬೊಳ್ಳೂರು, ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಮಧು ಆಚಾರ್ಯ ಮೂಲ್ಕಿ, ಶ್ರೀ ಸದಾನಂದ ಎಸ್. ಆಚಾರ್ಯ ಕಲ್ಯಾಣ ಪುರ,ಶ್ರೀ ತುಕಾರಾಮ ಆಚಾರ್ಯ ಬೆಂಗಳೂರು, ಶ್ರೀ ಶರತ್ ಚಂದ್ರ ಆಚಾರ್ಯ ಬೆಂಗಳೂರು, ಶ್ರೀ ಯು.ಎಸ್.ಗಿರೀಶ್ ಆಚಾರ್ಯ ಕೊಯಂಬುತ್ತೂರು, ಶ್ರೀ ಯೋಗೀಶ್ ಆಚಾರ್ಯ ಕೊಯಂಬತ್ತೂರು ಇವರ ಉಪಸ್ಥಿತಿಯಲ್ಲಿ ಸಮಾರಂಭ ಸಂಪನ್ನಗೊಳ್ಳಲಿದೆ.
ಪ್ರಶಸ್ತಿ ಪ್ರಧಾನ: ಇದೇ ವೇಳೆ ಸಮಾರಂಭದಲ್ಲಿ ಮಹಾಸಂಸ್ಥಾನದಿಂದ ವರ್ಷಂಪ್ರತಿ ನೀಡಲಾಗುವ ಪ್ರಶಸ್ತಿಗಳನ್ನು ಜಗದ್ಗುರುಗಳವರು ಪ್ರದಾನ ಮಾಡಲಿದ್ದಾರೆ. ಮಹಾಸಂಸ್ಥಾನದ ಪುನರುತ್ಥಾನಕ್ಕಾಗಿ ಸೇವೆ ಸಲ್ಲಿಸುತ್ತಿರುವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ ಹಾಗೂ ಕಲೆ ಸಾಹಿತ್ಯ ಶಿಕ್ಷಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಿರಿಯ ಮತ್ತು ಕ್ರೀಯಾಶೀಲರಾಗಿ ಸೇವೆ ಸಲ್ಲಿಸುತ್ತಿರುವವರಿಗೆ "ಆನೆಗುಂದಿ ಶ್ರೀ" ಪ್ರಶಸ್ತಿ ಪ್ರದಾನ ನಡೆಯಲಿದೆ. ಶ್ರೀ ಶ್ರೀಧರ ವಿ. ಆಚಾರ್ಯ ಮಂಬಯಿ ಇವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು, ಬ್ರಹ್ಮಶ್ರೀ ಸದಾಶಿವ ಪುರೋಹಿತ್ ಮಂಚಕಲ್ ಮೂಡಬಿದ್ರೆ (ವೈದಿಕ), ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಶಿಲ್ಪಿ ರಾಘವೇಂದ್ರ ಆಚಾರ್ಯ ಗದಗ (ಶಿಲ್ಪ), ಕನ್ನಡ ವಿ.ವಿ ಹಂಪಿ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ ಹೊಸಪೇಟೆ (ಸಾಹಿತ್ಯ ಸಂಶೋಧನೆ), ಹಿರಿಯ ಚಿತ್ರ ಕಲಾವಿದ ಶ್ರೀ ಮನೋಹರ ಆಚಾರ್ಯ ಬೆಂಗಳೂರು ( ಚಿತ್ರಕಲೆ),ಡಾ. ಬಿ. ಶ್ರೀಕಂಠಾಚಾರ್ ಮೈಸೂರು (ಬಹುಮಾದ್ಯಮ), ಶ್ರೀ ಬಿ.ಬಿ ಪತ್ತಾರ ಬೆಂಗಳೂರು (ಆಡಳಿತ ಸೇವೆ) ಶ್ರೀ ಬೈಕಾಡಿ ಜನಾರ್ಧನ ಆಚಾರ್ಯ ಮಂಗಳೂರು(ಮರಣೋತ್ತರ) ( ಸಮಾಜ ಸೇವೆ) ಶ್ರೀ ಜಗದೀಶ್ ಆಚಾರ್ಯ ಪುತ್ತೂರು (ಸಂಗೀತ), ಆಚಾರ್ಯ ಶ್ರೀಧರದಾಸ್ ಜಿ ಕುಂಭಾಶಿ (ಹರಿಕಥೆ), ಶ್ರೀ ಸುರೇಶ್ ಆಚಾರ್ಯ ಬೆಂಗಳೂರು (ಉದ್ಯಮ) ಇವರಿಗೆ ಆನೆಗುಂದಿಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುತ್ಯಾರು ಸೂರ್ಯಚೈತನ್ಯ ಗ್ಲೋಬಲ್ ಹೈಸ್ಕೂಲ್ ನಿಕಟಪೂರ್ವ ಅಧ್ಯಕ್ಷ ಶ್ರೀ ಶಂಭುದಾಸ ಅವರಿಗೆ ವಿಶೇಷ ಗೌರವಾಭಿನಂದನೆ ನಡೆಯಲಿದೆ.
ಪಟ್ಟಾಭಿಷೇಕ ಮಹೋತ್ಸವದ ವರ್ಧಂತಿಯ ಪುಣ್ಯ ಸಮಾರಂಭದಲ್ಲಿ ಸಮಸ್ತ ಸಮಾಜ ಬಾಂಧವರು ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಗದ್ಗುರಗಳವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆನೆಗಂದಿ ಪ್ರತಿಷ್ಠಾನವು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.


