ಮಂಜೇಶ್ವರ:- ಭಾರತೀಯ ಜನತಾ ಪಕ್ಷದ ಮಂಜೇಶ್ವರ ವಿಧಾನಸಭಾ ಚುನಾವಣಾ ಕಚೇರಿ ಉದ್ಘಾಟನೆ ಉಪ್ಪಳ ಬಳಿಯ ಜೋಡುಕಲ್ಲಿನಲ್ಲಿರುವ ಫ್ರೆಂಡ್ಸ್ ಸಭಾಭವನದಲ್ಲಿ ಇಂದು ಬೆಳಗ್ಗೆ ನಡೆಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಪೈವಳಿಕೆ ಶಾಲಾ ಮೈದಾನದಲ್ಲಿ ವಿಮಾನದಲ್ಲಿ ಬಂದಿಳಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಶ್ರೀಕಾಂತ್ ರನ್ನ ಬಿಜೆಪಿ, ಯುವಮೋರ್ಚಾ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಜೋಡುಕಲ್ಲಿಗೆ ಆಗಮಿಸಿ, ಹೆಂಗೆಳೆಯರ ಹೂ - ಪುಷ್ಪದ ಭವ್ಯ ಸ್ವಾಗತದೊಂದಿಗೆ, ನಾಸಿಕ್ ಬ್ಯಾಂಡ್ ನ ಮೆರವಣಿಗೆಯೊಂದಿಗೆ ಪಕ್ಷದ ಕಚೇರಿಗೆ ಕರೆತರಲಾಯಿತು. ಈ ವೇಳೆ ಪಕ್ಷದ ಕಚೇರಿ ಮುಂಭಾಗದಲ್ಲಿ ಬಿಜೆಪಿ ಮಹಿಳಾಮೋರ್ಚಾದ ವತಿಯಿಂದ ಆರತಿ ಬೆಳಗಿ, ತಿಲಕವಿಟ್ಟು ಕೆ.ಸುರೇಂದ್ರನ್ ರನ್ನ ಸ್ವಾಗತಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷರಾದ ಕೆ.ಸುರೇಂದ್ರನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನ ಕಾರ್ಕಳ ಶಾಸಕ ಕೇರಳ ಸಹ ಪ್ರಭಾರಿ ಕೆ.ಸುನಿಲ್ ಕುಮಾರ್ ಕಾರ್ಕಳ ದೀಪ ಬೆಳಗಿಸಿ ಚುನಾವಣಾ ಕಚೇರಿಯನ್ನ ಉದ್ಘಾಟಿಸಿದರು. ಬಳಿಕ ನೆರೆದ ಕಾರ್ಯಕರ್ತ ಬಂಧುಗಳನ್ನುದ್ದೇಶಿಸಿ ಮಾತನಾಡಿದ ಅವರು ಈ ಬಾರಿ ನಡೆಯುವ ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಸ್ಪರ್ಧಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕಳೆದ ಬಾರಿ ಕೇವಲ 87 ಮತದಲ್ಲಿ ಸೋಲನ್ನು ಅನುಭವಿಸಿದರೂ, ಈ ಬಾರಿ ಕೆ.ಸುರೇಂದ್ರನ್ ರನ್ನ ಅದೇ ಸ್ಥಾನದಲ್ಲಿ ನಿಲ್ಲಿಸಿ ಗೆಲುವು ಸಾಧಿಸುವೆವು ಎಂಬ ಅಚಲ ನಂಬಿಕೆಯಿದೆ.
ಈ ಬಾರಿಯ ಚುನಾವಣೆ ಬಿಜೆಪಿಯ ಸೋಲಿಗಾಗಿ ಅಲ್ಲ ಅದು ಗೆಲುವಿಗಾಗಿ. ಅದಕ್ಕಾಗಿ ಬಿಜೆಪಿಯ ಸರ್ವ ಕಾರ್ಯಕರ್ತರ ಪರಿಶ್ರಮ ಅತ್ಯಗತ್ಯ. ಕೇಂದ್ರದಲ್ಲಿ ನರೇಂದ್ರಮೋದಿಯಂತೆ ಮಂಜೇಶ್ವರದಲ್ಲಿ ಸುರೇಂದ್ರನ್. ಮಂಜೇಶ್ವರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಹೊರತು ಎಡ - ಬಲ ರಂಗಗಳಿಂದ ಸಾಧ್ಯವಿಲ್ಲ. ಅದಕ್ಕಾಗಿ ನರೇಂದ್ರಮೋದಿಯ ನೇತೃತ್ವದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ರ ಗೆಲುವಿಗೆ ಹಾಗೂ ಮಂಜೇಶ್ವರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಸೂಕ್ತವೆಂದು ಬಿಜೆಪಿಯು ತೀರ್ಮಾನಿಸಿದೆ ಎಂದು ಅವರು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಮಣಿಕಂಠ ರೈ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾ. ಶ್ರೀಕಾಂತ್ ಕಾಸರಗೋಡು, ಒ.ಬಿ.ಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ ನ್ಯಾ. ನವೀನ್ ರಾಜ್ ಕೆ.ಜೆ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಬೋಳಿಯಾರ್, ಗಣೇಶ್ ಹೊಸಬೆಟ್ಟು, ಉತ್ತರ ವಲಯ ಉಪಾಧ್ಯಕ್ಷ ಕೋಳಾರ್ ಸತೀಶ್ಚಂದ್ರ ಭಂಡಾರಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ರಮೇಶ್, ಬಾಲಕೃಷ್ಣ ಶೆಟ್ಟಿ ವಾನಂದೆ, ಜಿಲ್ಲಾ ಉಪಾಧ್ಯಕ್ಷೆ ರೂಪವಣಿ ಆರ್. ಭಟ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ ಪರಂಕಿಲ, ಶ್ರೀಮತಿ ಪುಷ್ಪಾ ಅಮ್ಮೆಕಳ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ. ಅಂಗಡಿಪದವು, ಸಂತೋಷ್ ಶೆಟ್ಟಿ ದೈಗೋಳಿ, ನೇತಾರರಾದ ಪ್ರಮೀಳಾ ಸಿ. ನಾಯ್ಕ್, ಸಂಜೀವ ಶೆಟ್ಟಿ, ಸುಧಾಮ ಗೋಸಾಡ, ನ್ಯಾ. ಸದಾನಂದ ರೈ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶ್ರೇಯಾ, ತನುಜಾ, ಅನುಷಾ ವಂದೇ ಮಾತರಂ ಹಾಡಿ, ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಯಾದವ್ ಸ್ವಾಗತಿಸಿ, ಆದರ್ಶ್ ಬಿ.ಎಂ ವಂದಿಸಿದರು.
ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಬಿಜೆಪಿ ಪ್ರತಿನಿಧಿಗಳಾದ ಶ್ರೀಮತಿ ಅಶ್ವಿನಿ ಎಂ.ಎಲ್, ಶ್ರೀಮತಿ ಸರೋಜಾ ಆರ್ ಬಲ್ಲಾಳ್, ಶ್ರೀಮತಿ ಚಂದ್ರಾವತಿ, ಕೆ.ವಿ ಭಟ್, ಅನಿಲ್ ಮಣಿಯಂಪಾರೆ, ರಾಧಾಕೃಷ್ಣ, ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷರಾದ ಲೋಕೇಶ್ ನೋಂಡಾ, ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ರಾಜೇಶ್ ತೂಮಿನಾಡ್, ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿ ಅಧ್ಯಕ್ಷರಾದ ಉದಯ ಚೆಟ್ಟಿಯಾರ್, ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷರಾದ ಸುಧಾಕರ ಕಾಮತ್ ಕುಂಬಳೆ, ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ವಸಂತ ಕುಮಾರ್ ಮಯ್ಯ ಪ್ರತಾಪನಗರ, ಬಿಜೆಪಿ ಮಿಂಜ ಪಂಚಾಯತ್ ಸಮಿತಿ ಅಧ್ಯಕ್ಷರಾದ ಕೃಷ್ಣ ಬೆಜ್ಜ, ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಬಾಕ್ರಬೈಲ್, ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿ ಅಧ್ಯಕ್ಷರಾದ ಪದ್ಮನಾಭ ಬಾಡೂರು, ಒಬಿಸಿ ಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಪೂಜಾರಿ ಕಡಂಬಾರ್ ಭಂಡಾರಮನೆ, ಎಸ್.ಸಿ ಎಸ್.ಟಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಬಾಬು ಮಾಸ್ತರ್, ಮಹಿಳಾ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷೆ ಶ್ರೀಮತಿ ಸವಿತಾ ಬಾಳಿಕೆ, ಯುವಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಇಚ್ಚಿಲಂಗೋಡ್ ಸೇರಿದಂತೆ ಪಂಚಾಯತ್ ನ ಸಮಿತಿ, ಬೂತ್ ಸಮಿತಿಯ ಪಧಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
