ಧಾರ್ಮಿಕ ನೇತಾರ, ಹಿಂದುತ್ವದ ಸೇವಕ, ಸನಾತನ ಧರ್ಮವನ್ನೇ ಉಸಿರಾಗಿಸಿ ಸಮಾಜದ ಜೊತೆ ಬೆರೆಯುತ್ತಿರುವ, ಮಂಗಳೂರಿನ ಎಂ.ಪಿ. ಫ್ಯಾಮಿಲಿ ಶಾಪ್ ಮಾಲಕ ಶ್ರೀ ದಿನೇಶ್ ಎಂ.ಪಿ ಇವರ ಸಹಕಾರದಲ್ಲಿ ದೈವ ಸೇವಕರಿಗೆ ಅಕ್ಕಿ ಮತ್ತು ದಿನಸಿ ಸಾಮಾಗ್ರಿ ನೀಡಲಾಯಿತು. ಕೊರೋನೋ ಲಾಕ್ ಡೌನ್ನಲ್ಲಿ ದೈವಗಳ ಕೋಲ, ಪರ್ವ ಸೇವೆಗಳು ಇಲ್ಲದೆ ಅದನ್ನೇ ನಂಬಿ ಬದುಕುತ್ತಿದ್ದ ದೈವದ ಸೇವಕರನ್ನು ಗುರುತಿಸಿ ಆಹಾರ ಸಾಮಗ್ರಿಗಳನ್ನು ಶ್ರೀ ಸಾಯಿ ಪರಿವಾರ್ ಸದಸ್ಯರು ತಲುಪಿಸಿದರು. ಈ ಸಂದರ್ಭದಲ್ಲಿ ಕೆರೆಬೈಲ್ ಗುಡ್ಡೆ ಕೊರಗತನಿಯ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಬಿ, ಕಾರ್ಯದರ್ಶಿ ಪ್ರವೀಣ್ ರೈ ಹಾಗೆಯೇ ಸಾಯಿ ಪರಿವಾರ್ನ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ರಾಕೇಶ್ ಕೊಣಾಜೆ, ಸತೀಶ್ ಭಟ್ನಗರ, ದೀಕ್ಷಿತ್ ಪೂಜಾರಿ, ಅರುಣ್ ದಬ್ಬೇಲಿ, ಸತೀಶ್ ಚೆಂಬುಗುಡ್ಡೆ, ಸಂಪತ್ ಧರ್ಮನಗರ, ಉದಯ್ ಧರ್ಮನಗರ, ಹಿತೇಶ್ ಉಳ್ಳಾಲಬೈಲ್, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಉದಯ, ಶೈಲೇಶ್ ಸೇವಂತಿಗುಡ್ಡೆ, ರಜನೀಶ್ ನಾಯಕ್, ಶವಿತ್ ಉಚ್ಚಿಲ್, ಸಂತೋಷ್ ಅಂಬ್ಲಮೊಗರು ಇದ್ದರು.
ದೈವಗಳ ಕೋಲ, ಪರ್ವ ಸೇವೆಗಳು ಇಲ್ಲದೆ ಅದನ್ನೇ ನಂಬಿ ಬದುಕುತ್ತಿದ್ದ ದೈವದ ಸೇವಕರನ್ನು ಗುರುತಿಸಿ ಆಹಾರ ಸಾಮಗ್ರಿಗಳನ್ನು ತಲುಪಿಸಿದ ಶ್ರೀ ಸಾಯಿ ಪರಿವಾರ್ ಟ್ರಸ್ಟ್
June 23, 2021
0
Tags
