ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೋವಿಡ್ ಲಸಿಕೆ ನೀಡಿಕೆ.
June 25, 2021
1
ನಾಪೋಕ್ಲು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರವಾಹ ಬರುವಂತಹ ಚೆರಿಯಪರಂಬು, ಕಾರೆಕಾಡು ವ್ಯಾಪ್ತಿಯಲ್ಲಿರುವ 18 ವರ್ಷ ಮೇಲ್ಪಟ್ಟವರಿಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೋವಿಡ್ ಲಸಿಕೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚೋಂದಕಿಯವರ ಮಾರ್ಗದರ್ಶನದಲ್ಲಿ ನೀಡಲಾಯಿತು. ಪಂಚಾಯತ್ ಅದ್ಯಕ್ಷರು, ಸದಸ್ಯರು, ಡಾ.ಶಿಲ್ಪ ಮತ್ತು ಆರೋಗ್ಯ ಕಾರ್ಯಕರ್ತೆಯವರಾದ ಮಮತಾ, ಜಾನಕಿ, ಉಮಾಮಹೇಶ್ವರಿ, ಆಶಾ ಕಾರ್ಯಕರ್ತೆಯವರಾದ ಚಂದ್ರಕಲಾ, ಗಾಯತ್ರಿ, ಅಂಗನವಾಡಿ ಕಾರ್ಯಕರ್ತೆಯವರಾದ ಸ್ವಾತಿ, ಅಜಿತ, ಆಶಾ, ಆಶಾಲತಾ ಇವರೆಲ್ಲರೂ ಸಂಪೂರ್ಣ ಜವಾಬ್ದಾರಿಯನ್ನು ನಿಬಾಯಿಸಿ ಕೊವಿಡ್ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು ಮತ್ತು ನಾಪೋಕ್ಲು ಪಂಚಾಯತ್ ವ್ಯಾಪ್ತಿಯಲ್ಲಿರುವ 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಸಿಗಬೇಕೇಂದೂ ನಾಪೋಕ್ಲು ಕೋವಿಡ್ ಟಾಸ್ಕ್ ಪೊರ್ಸ್ ಸದಸ್ಯರ ಅಭಿಪ್ರಾಯವಾಗಿದೆ.
Tags

ಕೊವಿಡ್ ಲಸಿಕೆ ಕಾರ್ಯಕ್ರಮ ಚೆನ್ನಾಗಿದೆ..
ReplyDelete