ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಎಂಬ ಇಪ್ಪತ್ತ ಒಂಬತ್ತನೇ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ
June 07, 2021
0
ಮಂಜೇಶ್ವರ:- ಗೌರವ ಡಾಕ್ಟರೇಟ್ ಪುರಸ್ಕೃತ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಡಲಾಚೆಯ ಕಣ್ಮಣಿ, ತುಳುನಾಡ್ದ ಬೊಳ್ಳಿ ಮೂಡಂಬೈಲು ಶ್ರೀ ರವಿ ಶೆಟ್ಟಿ ಕತಾರ್ ಇವರ ಸೇವಾರ್ಥ ವಿತರಿಸಲಾಯಿತು. ಪ್ರಸ್ತುತ ಇವರು ಕತಾರ್ ನಲ್ಲಿ ಕರ್ನಾಟಕ ಮೂಲದ ಕನ್ನಡ-ತುಳು ಸಂಘಟನೆಗಳಲ್ಲಿ ಅಪಾರ ಸೇವೆಗೈಯುತ್ತಾ, ಅಪಾಂಗ ವ್ಯಕ್ತಿಗಳಿಗೆ, ವೃದ್ಧಾಶ್ರಮಕ್ಕೆ ಸಹಾಯವನ್ನಾ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಪುತ್ತೂರಿನಲ್ಲಿ ನೇಸರ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ ಹಲವಾರು ವ್ಯಕ್ತಿಗಳ ಬದುಕಿಗೆ ದಾರಿದೀಪವಾಗಿದ್ದು, ಇದೀಗ ಹಲವು ವರ್ಷಗಳಿಂದ ಕತಾರ್ ನಲ್ಲಿ ಉದ್ಯಮಿಯಾಗಿರುವರು. ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆ ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಎಂಬ ಇಪ್ಪತ್ತ ಒಂಬತ್ತನೇ ದಿನದ ಮಧ್ಯಾಹ್ನದ ಬಿಸಿ ಊಟ ವಿತರಣೆ ಇಂದು ನಡೆಯಿತು. ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಜಿನೀಶ್ ರವರಿಗೆ ಸೇವಾರ್ಥಿ ಪರವಾಗಿ ಶ್ರೀ ಮಂಜುನಾಥ ಅಡಪ್ಪ ಸಂಕಬೈಲ್ ವಿತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ದೀಪಕ್ ರಾಜ್ ಉಪ್ಪಳ, ಅರ್ಜುನ್ ಭಕ್ತ ಮಂಜೇಶ್ವರ, ಸುಧೀನ್ ವರ್ಕಾಡಿ, ಮೊದಲಾದವರು ಉಪಸ್ಥಿತರಿದ್ದರು.
Tags

