ಟೀಮ್ ಮಂಜುಶ್ರೀ ತುಳುನಾಡ್(ರಿ.) ನಮ್ಮ ಸಂಸ್ಥೆಯ ಹಿಂದಿನ (ಜೂನ್) ತಿಂಗಳು ವೀಕೆಂಡ್ ಕರ್ಫ್ಯೂ ನಿಮಿತ್ತ ಮುಂದೂಡಲಾಗಿದ್ದ "ಬಡವು" ಯೋಜನೆಯ 17 ಮತ್ತು 18ನೇ ಸೇವಾ ಕಾರ್ಯವು ಇದೇ ಬರುವ ದಿನಾಂಕ 11.07.2021ನೇ ಆದಿತ್ಯವಾರದಂದು ಜರಗಲಿರುವುದು.
ಈ ಸುಸಂದರ್ಭದಲ್ಲಿ "ಮಂಜುಶ್ರೀ ಕ್ರಿಯೇಷನ್ಸ್" ಲಾಂಛನದಲ್ಲಿ ಮೂಡಿಬರಲಿರುವ "ಟೀಮ್ ಮಂಜುಶ್ರೀ ತುಳುನಾಡ್(ರಿ.) ಕಲಾ ಚಾವಡಿ"ಯ ಮತ್ತು ಹಿರಿಯ ಕಲಾವಿದರ ನಟನೆಯ ರಹಸ್ಯ ಕಥಾ ಹಂದರವನ್ನು ಹೊಂದಿರುವ "ಕಿರುಚಿತ್ರ"ದ "ಟೀಸರ್" ಬಿಡುಗಡೆ ಕಾರ್ಯಕ್ರಮವು ಜರಗಲಿರುವುದು. ಈ ಸಂದರ್ಭದಲ್ಲಿ ಹಲವು ಗಣ್ಯರು ಭಾಗವಹಿಸಲಿರುವರು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ ಹೆಸರಿಡದ ಈ ಕಿರುಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವು "ಮನೋಜ್ ಕುಲಾಲ್ ಕೊಡಕ್ಕಲ್" ಇವರದ್ದಾಗಿದೆ ಅಲ್ಲದೆ ಮುಖ್ಯ ಪಾತ್ರ ಒಂದರಲ್ಲಿ ಮಿಂಚಲಿದ್ದಾರೆ. ಸಹ ನಿರ್ದೇಶಕರಾಗಿ ಮತ್ತು ಪ್ರಮುಖ ಪಾತ್ರದಲ್ಲಿ ವಂಶಿ ಪಂಡಿತ್ ಮಂಗಳೂರು, ಪುಷ್ಪರಾಜ್ ರಾವ್ ಛಾಯಾಗ್ರಹಣದಲ್ಲಿದ್ದಾರೆ. ಸಂಕಲನಕಾರರಾಗಿ ಚಂದ್ರೇಶ್ ಮಾನ್ಯ(ಕಾಸರಗೋಡು) ಮತ್ತು ಸಹ ಸಂಕಲನ ಸಚಿನ್ ಬಜಿರೆ(ವೇಣೂರು) ನೋಡಿಕೊಂಡರೆ, ಬಾಲಚಂದ್ರ ಶೆಟ್ಟಿ ಸೋಮೇಶ್ವರ, ವಿಕೇಶ್ ಕುಲಾಲ್ ಸಲಹೆ ನೀಡಲಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಕಲಾವಿದರು ನಟಿಸುವ ಈ ಕಿರುಚಿತ್ರವನ್ನು ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳಲ್ಲಿ ಚಿತ್ರೀಕರಿಸುವ ಯೋಜನೆ ಇದೆ ಈಗಾಗಲೇ ಟೀಸರ್ ಚಿತ್ರೀಕರಣವನ್ನು ಕಾಸರಗೋಡು ಜಿಲ್ಲೆಯಲ್ಲಿ ನಡೆಸಲಾಗಿದೆ ಎನ್ನುತ್ತಾರೆ ತಂಡದ ಮುಖ್ಯಸ್ಥರು.
