ತೊಕ್ಕೊಟ್ಟು : "ಸೇವೆಯಿಂದ ಸಾರ್ಥಕತೆ" ಎಂಬ ಧ್ಯೇಯದೊಂದಿಗೆ ಕಳೆದ ವರ್ಷದ ಕೊರೊನೋ ಸಂಕಷ್ಟ ಕಾಲದಲ್ಲಿ ಅಶಕ್ತರಿಗೆ, ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ 10,300 ಕ್ಕೂ ಅನ್ನವನ್ನು, ಆಹಾರ ಸಾಮಗ್ರಿ ನೀಡಿದ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್.
ಈ ವರ್ಷದ ಲಾಕ್ ಡೌನ್ ನಲ್ಲಿ ಸಹೃದಯಿ ದಾನಿಗಳ ನೆರವಿನಿಂದ ಸುಮಾರು ರೂ. 6.5 ಲಕ್ಷದಲ್ಲಿ 1000 ಆಹಾರ ಸಾಮಗ್ರಿಗಳನ್ನು ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಹ ಜನರಿಗೆ ತಲುಪಿಸಿದೆ. ಅಶಕ್ತರಿಗೆ ಅನ್ನದಾನದ ಸೇವೆ, ಅನಾರೋಗ್ಯ ಪೀಡಿತರಿಗೆ 3 ಲಕ್ಷಕ್ಕೂ ಅಧಿಕ ಆರ್ಥಿಕ ನೆರವು, ಹಾಗೆಯೇ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಭಜರಂಗದಳದ ಸಹಕಾರದಲ್ಲಿ ವ್ಯವಸ್ಥೆ, ಶವಸಂಸ್ಕಾರಕ್ಕೆ ಉಚಿತ ಅ್ಯಂಬುಲೆನ್ಸ್ ಸೇವೆ ಹಿಂದೂ ಯುವ ಸೇನೆಯ ಸಹಕಾರದಲ್ಲಿ ವ್ಯವಸ್ಥೆ, ದಾನಿಯ ನೆರವಿನಿಂದ ತಲಪಾಡಿಯಲ್ಲಿ ಬಡ ಕುಟುಂಬದ ಮನೆಯ ಸಂಪೂರ್ಣ ದುರಸ್ಥಿ, 500 ಕ್ಕೂ ಅದಿಕ ಮಾಸ್ಕ್ ವಿತರಣೆ, ಅರೋಗ್ಯ ಇಲಾಖೆಯ ಮೂಲಕ 300 ಕೋವಿಡ್ ಲಸಿಕೆ ನೀಡಿಕೆ ಈ ರೀತಿಯಾಗಿ ಹತ್ತು ಹಲವು ಸೇವಾಕಾರ್ಯದ ಮೂಲಕ ಮನೆಯಲ್ಲಿ ಕೂರದೆ ಸಮಾಜದ ಜೊತೆ ಬೆರೆತ ಸಂಸ್ಥೆಯಾಗಿದೆ.
ಬಿಜೆಪಿ ಮಂಗಳೂರು ಮಂಡಲಾದ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮೈಸೂರು ಇಲೆಕ್ಟಿಕಲ್ಸ್ ಪ್ರೈ ಲಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕೈರಂಗಳ ಶಾರದಾ ಗಣಪತಿ ಶಾಲೆಯ ಸಂಚಾಲಕ ರಾಜರಾಮ್ ಭಟ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮಸ್ಕತ್ನ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನಮನೆ, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಯಶೋಧರ ಚೌಟ, ಭಜರಂಗದಳದ ಪುನೀತ್ ಅತ್ತಾವರ, ಮಂಗಳೂರು ಸೇವಾಂಜಲಿ ಟ್ರಸ್ಟ್ನ ಹನುಮಂತ ಕಾಮತ್, ನರೇಶ್ ಶಣೈ, ಅರ್. ಜೆ. ರಶ್ಮಿ ಉಳ್ಳಾಲ್, ಮಾದವ ಉಳ್ಳಾಲ್
ಸಾಯಿ ಪರಿವಾರ್ ಟ್ರಸ್ಟ್ನ
ಸೇವೆಯಲ್ಲಿ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಸತೀಶ್ ಭಟ್ನಗರ, ದೀಕ್ಷಿತ್ ಪೂಜಾರಿ, ಅರುಣ್ ದಬ್ಬೇಲಿ, ಶಮೀತ್ ಧರ್ಮನಗರ, ಸಂಪತ್ ಧರ್ಮನಗರ, ಉದಯ್ ಧರ್ಮನಗರ, ಹಿತೇಶ್ ಉಳ್ಳಾಲಬೈಲ್, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ರಾಕೇಶ್ ಕೋಣಾಜೆ, ರಜನೀಶ್ ನಾಯಕ್, ತಿಲಕ್, ಜೀವನ್, ಶೈಲೇಶ್ ಸೇವಂತಿಗುಡ್ಡೆ, ರಾಜೇಶ್ ಮಡಿವಾಳ, ಶವಿತ್ ಉಚ್ಚಿಲ್, ಸತೀಶ್ ಚೆಂಬುಗುಡ್ಡೆ, ಸಂತೋಷ್ ಅಂಬ್ಲಮೊಗರು, ಕುಶಾಲ್ ರಾಜ್, ತೇಜ್ ಕುಂಪಲ, ಸಾಗರ್ ಪಾವೂರು ಇದ್ದರು.
