ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 8ರ 17 ವಾರಗಳ ಕಾಲ ನಡೆದ 72 ದಿನಗಳ ಮೊದಲ ಇನ್ನಿಂಗ್ಸ್ ಹಾಗೂ 48 ದಿನಗಳ ಸೆಕೆಂಡ್ ಇನ್ನಿಂಗ್ಸ್ ಜರ್ನಿ, ಒಟ್ಟಾರೆ 120 ದಿನಗಳ ಭರ್ಜರಿ ಪ್ರಯಾಣ ಕೊನೆಯಾಗಿದೆ. ಶನಿವಾರವೇ ಗ್ರ್ಯಾಂಡ್ ಫಿನಾಲೆಗೆ ಚಾಲನೆ ಸಿಕ್ಕಿತ್ತು. ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುವ ಅದ್ದೂರಿ ವೇದಿಕೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆ ನಡೆಯಿತು. ಶನಿವಾರ ರಾತ್ರಿಯ ಫಿನಾಲೆಯಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರು. ಇದ್ದ ಟಾಪ್ 5 ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರಗಿ, ಅರವಿಂದ್ ಕೆ.ಪಿ, ಮಂಜು ಪಾವಗಡ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಗೌಡ ಇದ್ದರು. ಇವರಲ್ಲಿ ಪ್ರಶಾಂತ್ ಸಂಬರಗಿ ಅವರು ಐದನೇ ಸ್ಥಾನ ಪಡೆದು ಹೊರ ಬಿದ್ದರೆ, ನಂತರ ನಾಲ್ಕನೇ ಎಲಿಮಿನೇಷನ್ ನಿಜ್ಜಕ್ಕೂ ಎಲ್ಲರಿಗೂ ಶಾಕ್ ನೀಡಿತ್ತು. ಹೌದು, ವೈಷ್ಣವಿ ಗೌಡ ಅವರು ಪ್ರಶಾಂತ್ ನಂತರ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದರು. ಇದು ನಿಜಕ್ಕೂ ಪ್ರೇಕ್ಷಕರು ಹಾಗೂ ಉಳಿದಿರುವ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿತ್ತು. ಟಾಪ್ 3ಗೆ ಲಗ್ಗೆಯಿಟ್ಟಿದ್ದ ಮಂಜು ಪಾವಗಡ, ಅರವಿಂದ್ ಕೆ.ಪಿ, ಹಾಗೂ ದಿವ್ಯಾ ಉರುಡುಗ ಅವರಲ್ಲಿ ಯಾರು ಈ ಸಲ ಗೆದ್ದು ಟ್ರೋಫಿ ಕೈಯಲ್ಲಿ ಹಿಡಿಯಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಮೂರನೇ ಸ್ಥಾನ ಪಡೆದು ಇಂದು ದಿವ್ಯಾ ಉರುಡುಗ ಮೊದಲು ಮನೆಯಿಂದ ಹೊರ ಬಂದರೆ, ಉಳಿದ ಅರವಿಂದ್ ಹಾಗೂ ಮಂಜು ಪಾವಗಡ. ಇವರಲ್ಲಿ ಮಂಜು ವಿನ್ನರ್ ಆಗಿದ್ದಾರೆ.
ಮಂಜು ಅವರು ಟಾಸ್ಕ್, ಮನೋರಂಜನೆ ಹಾಗೂ ಮನೆಯಲ್ಲಿ ಎಲ್ಲರ ಜೊತೆ ಇದ್ದ ರೀತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ಕಾರಣದಿಂದಾಗಿ ಮಂಜು ಈ ಸಲ ವಿನ್ನರ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿತ್ತು. ಅರವಿಂದ್ ಟಾಸ್ಕ್ ವಿಷಯದಲ್ಲಿ ಉತ್ತಮ ಪ್ರದರ್ಶನ ತೋರಿದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬಿದ್ದಿದ್ದರು. ಇನ್ನು ಜೊತೆಗೆ ಹೆಚ್ಚಿನ ಸಮಯ ದಿವ್ಯಾ ಉರುಡುಗ ಅವರೊಂದಿಗೆ ಕಳೆದಿದ್ದು ಅವರಿಗೆ ಕೊಂಚ ಹೊಡೆತ ಕೊಟ್ಟಿದೆ ಎಂದೂ ಹೇಳಲಾಗುತ್ತಿದೆ.
ಕೃಪೆ : ಅಂತರ್ಜಾಲ

ಸರ್ ಮಂಜು ರವರು ಒಳ್ಳೆ ಟಾಸ್ಕ್ ಕೊನೆವರೆಗೂ ಕೊಟ್ಟಿದಾರೆ ಅದರಿಂದ ಈ ಸಲದ ವಿನ್ನರ್ ಮಂಜು
ReplyDelete