ಮಂಜೇಶ್ವರ : ಆಕ್ರಮಣಕಾರೀ ಸ್ವಭಾವ ಹೊಂದಿರುವ ಆಡಳಿತಗಾರರನ್ನು ಕಾಲಕ್ಕೆ ತಕ್ಕಂತೆ ಪಾತಾಳಕ್ಕೆ ತಳ್ಳಿರುವುದಾದರೆ ಭಾರತದ ಮಣ್ಣಲ್ಲಿ ಇತಿಹಾಸ ಮರುಕಳಿಸಲಿದೆಯೆಂದು ಆ ಯುಗಕ್ಕಾಗಿ ತುಳಿತಕ್ಕೊಳಗಾದವರ ಮತ್ತು ಕಷ್ಟಪಟ್ಟು ದುಡಿಯುವ ವರ್ಗದ ಹೋರಾಟದ ಕಿಚ್ಚಿಗೆ ಇನ್ನಷ್ಟು ಆತ್ಮ ಬಲವನ್ನುಂಟು ಮಾಡಬಹುದೆಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಶಾದ್ ಮಂಗಲಶ್ಶೇರಿ ಹೇಳಿದರು. ಕೊರೋನಾ ಮಹಾ ಮಾರಿಯ ಈ ಸಂದರ್ಭದಲ್ಲಿ ಸಂಕಷ್ಟ ಅನುಭವಿಸುತ್ತಿರುವ ದೇಶದ ಜನತೆಗೆ ಆತ್ಮ ವಿಶ್ವಾಸ ತುಂಬ ಬೇಕಾದ ಆಡಳಿತ ವರ್ಗ ಫಾಸಿಸ್ಟ್ ಭಯೋತ್ಪಾದನೆಯನ್ನು ನಡೆಸುತ್ತಿದೆ. ದೇಶದ ಅಸ್ಥಿತ್ವಕ್ಕೆ ಆಧಾರವಾಗಿರುವ ಕಷ್ಟಪಟ್ಟು ದುಡಿಯುವ ಕಾರ್ಮಿಕರ ಹಕ್ಕನ್ನು ತಿದ್ದುಪಡಿ ಮಾಡಿ ಕರಿ ನಿಯಮ ನಿರ್ಮಾಣ ಮಾಡಿ ಗುಲಾಮಗಿರಿಗೆ ತಳ್ಳುವಾಗ ಹಿಂಸಾಕಾರರಿಲ್ಲದ ಉದ್ಯೋಗವಕಾಶಗಳ ನಿರ್ಮಾಣಕ್ಕಾಗಿ ಸ್ವತಃ ತಯಾರಾಗಬೇಕೆಂದು ಅವರು ಕೇಳಿಕೊಂಡರು.
SDTU ಹೊಸಂಗಡಿ ಆಯೋಜಿಸಿದ ಕಾರ್ಮಿಕರ ಸಂಗಮ ಸದಸ್ಯತ್ವ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೂರಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಕಾರ್ಮಿಕ ಸಂಘಟನೆಗಳಿಗೆ ರಾಜೀನಾಮೆ ನೀಡಿ SDTU ಸದಸ್ಯತ್ವವನ್ನು ಸ್ವೀಕರಿಸಿದರು. ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಸಲಾಂ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.
ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಹೊಸಂಗಡಿ, SDTU ಜಿಲ್ಲಾಧ್ಯಕ್ಷ ಅಶ್ರಫ್ ಗೋಳಿಯಡ್ಕ, ಜಿಲ್ಲಾ ಕಾರ್ಯದರ್ಶಿ ಸಾಲಿ ನೆಲ್ಲಿಕುನ್ನು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಚೇರ್ಮಾನ್ ಹಮೀದ್ ಹೊಸಂಗಡಿ, ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಅಶ್ರಫ್ ಬಡಾಜೆ ಮುಂತಾದವರು ಶುಭ ಹಾರೈಸಿ ಭಾಷಣ ಮಾಡಿದರು. ಎನ್ ಅಬ್ದುಲ್ ಹಮೀದ್ ಸ್ವಾಗತಿಸಿ, ರಜಾಕ್ ಮಜಿಬೈಲ್ ವಂದಿಸಿದರು.
