ಮಂಜೇಶ್ವರ:- ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರಮೋದಿ 71 ನೇ ಯವರ ಜನುಮ ದಿನವನ್ನ ರಾಷ್ಟ್ರಾದ್ಯಂತ ಬಿಜೆಪಿ ಪಕ್ಷವು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದ್ದು, ಕೇರಳ ರಾಜ್ಯದಲ್ಲೂ ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಆ ಪ್ರಯುಕ್ತ ಕೇರಳ - ಕರ್ನಾಟಕ ಗಡಿ ಭಾಗವಾದ ವರ್ಕಾಡಿ ಗ್ರಾಮ ಪಂಚಾಯತ್ ನ ಬಾಕ್ರಬೈಲ್ ಬಳಿಯ
ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನದಲ್ಲಿ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ನರೇಂದ್ರ ಮೋದಿಯವರ ನಾಮಾಂಕಿತದಲ್ಲಿ ಶ್ರೀ ದೇವರಿಗೆ "ವಿಶೇಷ ಪೂಜೆ" ಸಲ್ಲಿಸಲಾಯಿತು. ಬಳಿಕ
ವರ್ಕಾಡಿಯ ಸೀಕ್ರೆಟ್ ಹಾರ್ಟ್ ಚರ್ಚ್ ನಲ್ಲಿ ಬಿಜೆಪಿ ಪ್ರತಿನಿಧಿಗಳು ವಿಶೇಷವಾಗಿ ಕ್ಯಾಂಡಲ್ ಉರಿಸಿ, ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಇಂದು ವ್ಯಾಕ್ಸಿನ್ ದೊರಕುವ ವರ್ಕಾಡಿ ಪಂಚಾಯತ್ ನ ಸಿ.ಎಚ್.ಸಿ ಸೆಂಟರ್ ಗೆ ತೆರಳಿದ ಬಿಜೆಪಿ ನಿಯೋಗ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಆರೋಗ್ಯ ಕೇಂದ್ರ ದಲ್ಲಿ ವ್ಯಾಕ್ಸಿನ್ ಪಡೆಯಲು ಬಂದಿದ್ದ ಅಸಂಖ್ಯಾತ ಮುಸ್ಲಿಂ ಮಹಿಳೆಯರು ಕೂಡಾ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ದೇಶದ ನಾಯಕನಿಗೆ ಸರ್ವ ಶಕ್ತನ ಅನುಗ್ರಹವಿರಲಿ ಎಂದು ಹಾರೈಸಿದರು. ಬಳಿಕ
ದೈಗೋಳಿಯ ಶ್ರೀ ಸತ್ಯಸಾಯಿ ಸೇವಾಶ್ರಮಕ್ಕೆ ತೆರಳಿದ ನಿಯೋಗ ಆಶ್ರಮದ ರೂವಾರಿ ಡಾ. ಉದಯ ರವರಿಗೆ ಹಾಗೂ ಸಿಬ್ಬಂದಿಗಳಿಗೆ ಫಲವಸ್ತು, ನಿತ್ಯೋಪಯೋಗಿ ಜೀನಸು ಸಾಮಾಗ್ರಿಗಳನ್ನು ವಿತರಿಸಿದರು.
ಈ ವೇಳೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ಪಟ್ಟಿಲ್ತಾಡಿ, ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಬಾಕ್ರಬೈಲ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚೆಂಡೆಲ್, ಗ್ರಾಮ ಪಂಚಾಯತ್ ಪ್ರತಿನಿಧಿಗಳಾದ ರಾಜ್ ಕುಮಾರ್ ಶೆಟ್ಟಿ ಮುಟ್ಲ, ಶ್ರೀಮತಿ ಗೀತಾ ಭಾಸ್ಕರ್, ಶ್ರೀಮತಿ ಪದ್ಮಾವತಿ, ಹಾಗೂ ಬಿಜೆಪಿ ಕಾರ್ಯಕರ್ತೆ ಶ್ವೇತಾ ಪಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ರತನ್ ಕುಮಾರ್ ಹೊಸಂಗಡಿ

