ಕಾಶಿಪಟ್ಣ : ಕೇಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೇಳ ಕಾಶಿಪಟ್ಣ ವತಿಯಿಂದ 26ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಕೋವಿಡ್ ಮಾನದಂಡಗಳನ್ನು ಅನುಸರಿಸಿಕೊಂಡು ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಭಜನಾ ಕಾರ್ಯಕ್ರಮವನ್ನು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ ಇವರು ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೇಳ ಕಾಶಿಪಟ್ಣ ಇವರಿಂದ ಕುಣಿತ ಭಜನೆ ಜರುಗಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ರಾಜೇಶ್ ಕೆ ಶ್ರೀದುರ್ಗ ವಹಿಸಿದ್ದರು. ಶ್ರೀ ಗಣೇಶೋತ್ಸವ ಸಮಿತಿಗೆ 26ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಅಶೋಕ್ ಕುಮಾರ್ ಜೈನ್, ಶ್ರೀ ಚಂದ್ರಶೇಖರ ಸಾನರಬೆಟ್ಟು, ವಸಂತ ದೇವಾಡಿಗ ಕೊಂಕಣಬೆಟ್ಟು, ದಯಾನಂದ ಕೇಳ, ಕಿರಣ್ ಮೆರ್ಕಲ್, ಪ್ರಶಾಂತ್ ಕಲ್ಕುಡಂಗೆ, ನಾಗೇಶ್ ಮಠ, ಧರ್ಣಪ್ಪ ಮೂಲ್ಯ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅನಂತ ಅಸ್ರಣ್ಣ, ರತ್ನಾಕರ ಬುಣ್ಣನ್, ಅಶೋಕ್ ಪಡ್ಯೋಡಿ, ರವೀಂದ್ರ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಯಾನಂದ ಕೆ ಸ್ವಾಗತಿಸಿ, ಹರೀಶ್ ಸಾಲಿಯಾನ್ ಕಾಶಿಪಟ್ಣ ವಂದಿಸಿದರು. ರಕ್ಷಿತ್ ಆಚಾರ್ಯ ಕಾಶಿಪಟ್ಣ ಕಾರ್ಯಕ್ರಮ ನಿರೂಪಿಸಿದರು. ನಂತರ ವೈಭವದ ವಿಸರ್ಜನಾ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೇಳ ಕಾಶಿಪಟ್ಣ ಇವರ ಕುಣಿತ ಭಜನೆ ಮೆರುಗು ನೀಡಿತು.
ವರದಿ : ಪ್ರದೀಪ್ ಜಿ ಕಾಶಿಪಟ್ಣ
