✍️ ಅಬ್ದುಲ್ ಹಮೀದ್ ಗೋಳ್ತಮಜಲ್
ಇತಿಹಾಸದ ಪುಟದಲ್ಲಿ ಲೀನವಾಗಿ ಹೋಯಿತು ಕಲ್ಲಡ್ಕದ ಕೆ ಟಿ ಹೋಟೆಲ್ನ ಹಳೇ ಕಟ್ಟಡ
October 12, 2021
0
ಶತಮಾನ ಪೂರೈಸಿದ ಕಲ್ಲಡ್ಕದ ಈ ಹಳೇ ಕಟ್ಟಡ ದಲ್ಲಿ ಕಳೆದ ಏಳು ದಶಕಗಳ ಕಾಲ, ನಿಷ್ಕಳಂಕಬದುಕಿನ, ಪ್ರಾಮಾಣಿಕತೆಯ ಸಜ್ಜನ ತೇಜಸ್ಸು ತಂದೆ,ಮಗ ಎನ್ ಲಕ್ಷ್ಮೀ ನಾರಾಯಣ ಹೊಳ್ಳ ಹಾಗೂ ನರಸಿಂಹ ಹೊಳ್ಳ ಆರಂಭಿಸಿದ ಲಕ್ಷ್ಮಿನಿವಾಸ್ ಹೋಟೆಲ್ ಇಂದು ಜಿಲ್ಲೆಯ ಅಭಿವ್ರದ್ದಿಯ ದೃಷ್ಟಿಯಲ್ಲಿ ದರಶಾಯಿಯಾಯಿತು.1952ರಲ್ಲಿಆರಂಭಿಸಿದ ಈ ಹೋಟೆಲ್ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯಿತು.ಕಲ್ಲಡ್ಕ ಕೆ.ಟಿ.ಎಂಬ ನಾಮಕರಣದಲ್ಲಿ ಇಂದು ಅವರ ಮಕ್ಕಳು ರಾಜೇಂದ್ರ ಹೊಳ್ಳ, ಶಿವರಾಮ ಹೊಳ್ಳ, ಶ್ರೀನಿವಾಸ್ ಹೊಳ್ಳ ಹಾಗೂ ಅವರ ಮೊಮ್ಮಕ್ಕಳು ಅದೇ ರುಚಿಕರವಾದ ಖಾದ್ಯ ಪದಾರ್ಥಗಳನ್ನು ತಯಾರಿಸಿ ನೂರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಲಕ್ಷ್ಮಿ ಗಣೇಶ್ ಹಾಗೂ ಲಕ್ಷ್ಮಿ ನಿವಾಸ್ ಎಂಬ ನಾಮದಲ್ಲಿ ಗ್ರಾಹಕರ ಮನ ತಣಿಸುತ್ತಿದ್ದಾರೆ. ಪ್ರಸ್ತುತ ಹೋಟೆಲ್ ಲಕ್ಷ್ಮಿ ಗಣೇಶ್ ಕಲ್ಲಡ್ಕದ ಮೇಲಿನ ಬಜಾರಿನಲ್ಲಿ ಕಾರ್ಯಾಚರಿಸುತ್ತಿದ್ದರೆ. ಲಕ್ಷ್ಮಿ ನಿವಾಸ್ ಮೊದಲಿದ್ದ ಸ್ಥಳದಿಂದ ಹತ್ತು ಮೀಟರ್ ಹಿಂದೆ ಸುಸಜ್ಜಿತವಾದ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕಲ್ಲಡ್ಕದ ಕೆ.ಟಿ.ಜಗತ್ತಿನೆಲ್ಲಡೆ ಖ್ಯಾತಿಯನ್ನು ಪಡೆಯಲಿದೆ. ಒಟ್ಟಿನಲ್ಲಿ ಕಲ್ಲಡ್ಕದ ಕೆ.ಟಿ.ಹೋಟೆಲ್ ನ ಶತಮಾನದ ಕಟ್ಟಡ ಇನ್ನು ನೆನಪು ಮಾತ್ರ........ಕಲ್ಲಡ್ಕ ಕೆ.ಟಿ. ಪ್ರತಿದಿನ......
Tags
