ವರದಿ ಮತ್ತು ಚಿತ್ರ : ವಂಶಿ ಪಂಡಿತ್ ಮಂಗಳೂರು
ಮೋದಿ ಸರ್ಕಾರವು ಎಲ್ಲ ವರ್ಗದ ಜನರಿಗೆ ವಿವಿಧ ಜನಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ : ನಳಿನ್ ಕುಮಾರ್ ಕಟೀಲ್
October 07, 2021
0
ಭಾರತೀಯ ಜನತಾ ಪಕ್ಷ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಸೇವಾ ಸಮರ್ಪಣಾ ಅಭಿಯಾನದ ಅಂಗವಾಗಿ ಕಣ್ಣೂರು ವಾರ್ಡಿನ ಬೂತ್ ಸಂಖ್ಯೆ 195ರ ಫಲಾನುಭವಿಗಳ ಸಮಾವೇಶ ಇಂದು ಕಣ್ಣೂರ್ ಗಣೇಶೋತ್ಸವ ಸಮಿತಿ ಸಭಾಭವನದಲ್ಲಿ ಜರಗಿತು. ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಅವರ ಅದ್ಯಕ್ಷತೆ ವಹಿಸಿದರು. ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು, ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ ಡಿ ಕಾಮತ್ರವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನ ಭಾಷಣ ಮಾಡಿ ಮೋದಿ ಸರ್ಕಾರವು ಎಲ್ಲ ವರ್ಗದ ಜನರಿಗೆ ವಿವಿಧ ಜನಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು , ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ ಎಂದು ನುಡಿದರು. ಇದೆ ವೇಳೆಯಲ್ಲಿ ಸೇವೆ ಮತ್ತು ಸಮರ್ಪಣೆ ಅಭಿಯಾನದ ಹಿನ್ನೆಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರುವ ಮತ್ತು ಧನ್ಯವಾದ ತಿಳಿಸುವ ಪೋಸ್ಟ್ ಕಾರ್ಡ್ ಅಭಿಯಾನ.ಕೂಡ ನೆರೆವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಏ ಪಿ ಅಬ್ದುಲ್ಲಾ ಕುಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಲ ಪ್ರಭಾರಿಯಾದ ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್, ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಮೋನಪ್ಪ ಭಂಡಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೂಪ ಡಿ ಬಂಗೇರ, ಮನಪಾ ಮಹಾ ಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ , ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀ ನಿತಿನ್ ಕುಮಾರ್, ಮಂಡಲ ಉಪಾಧ್ಯಕ್ಷರಾದ ಶ್ರೀ ಕಿರಣ್ ರೈ, ಶ್ರೀ ರಮೇಶ್ ಕಂಡೆಟ್ಟು, ಮಂಡಲ ಕಾರ್ಯದರ್ಶಿಗಳಾದ ಶ್ರೀ ವಿನೋದ್ ಮೆಂಡನ್, ಮಂಡಲ ಪದಾಧಿಕಾರಿಗಳು, ಸ್ಥಳೀಯ ಮ ನ ಪಾ ಸದಸ್ಯರಾದ ಶ್ರೀಮತಿ ಚಂದ್ರಾವತಿ ವಿಶ್ವನಾಥ್, ಇತರ ಮ ನ ಪಾ ಸದಸ್ಯರು, ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ರಕೋಷ್ಠಗಳ ಪದಾಧಿಕಾರಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಹಾಗೂ ಮ ನ ಪಾ ಮುಖ್ಯ ಸಚೇತಕರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್ ಸ್ವಾಗತಿಸಿದರು, ಸ್ಥಳೀಯ ಬೂತ್ ಅಧ್ಯಕ್ಷರಾದ ಶ್ರೀ ವಿವೇಕ್ ಸುವರ್ಣ ಧನ್ಯವಾದವಿತ್ತರು .
Tags
