ವರದಿ ಮತ್ತು ಚಿತ್ರಗಳು : ರತನ್ ಕುಮಾರ್ ಹೊಸಂಗಡಿ
ಒಮಿಕ್ರಾನ್ ಆತಂಕ | ತಲಪಾಡಿ ಗಡಿ ಇನ್ನಷ್ಟು ಬಿಗಿ | ಆರ್ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಪ್ರವೇಶಕ್ಕೆ ಇಲ್ಲ ಅವಕಾಶ
November 30, 2021
0
ತಲಪಾಡಿ : ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಿಗು ತಪಾಸಣೆ ಮುಂದುವರೆದಿದೆ. ನಿನ್ನೆಯಂತೆ ಇಂದು ಕೂಡ ಕೆಳಗಿನ ತಲಪಾಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಸಾಗುವ ಎಲ್ಲಾ ವಿಧದ ವಾಹನಗಳನ್ನು ನಿಲ್ಲಿಸಿ ಆರ್ ಟಿ ಪಿ ಸಿ ಆರ್ ನೆಗೆಟಿವ್ ಪ್ರಮಾಣ ಪತ್ರ ತೋರಿಸಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಇಲ್ಲದ ಪ್ರಯಾಣಿಕರಿಗೆ ಸ್ಥಳದಲ್ಲೇ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿ, ಪರೀಕ್ಷೆ ನಡೆಸಿದಾಗ ಮೊಬೈಲ್ಗೆ ಲಭಿಸುವ ಸಂದೇಶವನ್ನು ತಪಾಸಣಾ ನಿರತ ಅಧಿಕಾರಿಗಳಿಗೆ ತೋರಿಸಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಕಾಸರಗೋಡು - ಮಂಗಳೂರು ರಸ್ತೆಯಲ್ಲಿ ಸಾಗುವ ಬಸ್ ಪ್ರಯಾಣಿಕರಿಗೆ ಯಾವುದೇ ತಪಾಸಣೆ ಇಲ್ಲವೆಂದು ತಿಳಿದು ಬಂದಿದೆ. ಬಸ್ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ ಪಿ ಸಿ ಆರ್ ನೆಗೆಟಿವ್ ಪ್ರಮಾಣ ಪತ್ರ ಇಲ್ಲದೇ ಬಸ್ ಪ್ರಯಾಣಕ್ಕೆ ಅವಕಾಶ ನೀಡಬಾರದೆಂದು ಬಸ್ ನಿರ್ವಾಹಕಗೆ ಈ ಹಿಂದೆಯೇ ಆದೇಶ ನೀಡಲಾಗಿತ್ತು. ಇಲಾಖೆ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ನಿನ್ನೆಯಿಂದಲೇ ತಪಾಸಣೆ ನಿರತರಾಗಿದ್ದರೆ. ಕಾಸರಗೋಡು ಜಿಲ್ಲೆಯ ಸಾರಡ್ಕ, ಪಂಜಿಕಲ್ಲು ಸ್ವರ್ಗ ಎಂಬಿಡೆಗಳಲ್ಲಿಯೂ ತಪಾಸಣೆ ಆರಂಭಿಸಲಾಗಿದೆ. ಇದೀಗ ಮಂಗಳೂರು ಭಾಗಕ್ಕೆ ಸಾಗುವ ವಾಹನ ಸಂಚಾರ ಸುಗಮವಾಗಿಯೇ ಮುಂದುವರಿದಿದೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ವಿಭಾಗದ ಶ್ರೀಮತಿ ಶೈಲ ಖಾರ್ವಿ ಅವರು ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Tags
