ಮಂಗಳೂರು : ಅತ್ಯುತ್ತಮ ಕಥಾ ಹಂದರವನ್ನು ಒಳಗೊಂಡ ಎ.ಟಿ.ಎಮ್ ಕಿರುಚಿತ್ರವು ಇದೇ ಬರುವ ದಿನಾಂಕ 22.12.2021 ಬುಧವಾರದಂದು ಕರಾವಳಿ ಕರ್ನಾಟಕದ ಜನಪ್ರಿಯ ವಾಹಿನಿ ಡೈಝೀವರ್ಲ್ಡ್ ಇವರ ಲೋಕಲ್ವುಡ್ (LOCALWOOD) ಅಪ್ಲಿಕೇಷನ್ನಲ್ಲಿ ಬಿಡುಗಡೆಗೊಳ್ಳಲಿದೆ.
ಯುವ ನಿರ್ದೇಶಕ ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ, ತುಕರಾಮ್ ಬಾಯಾರು ಇವರ ನಿರ್ಮಾಣದಲ್ಲಿ ತಯಾರಾದ ಈ ಕಿರುಚಿತ್ರದ ಛಾಯಾಗ್ರಹಣ ಗೋಕುಲಕೃಷ್ಣನ್ ನಿರ್ವಹಿಸಿದ್ದಾರೆ., ಸಂಗೀತ ನಿರ್ದೇಶನವನ್ನು ಜಯಕಾರ್ತಿ, ಸಹ ನಿರ್ದೇಶಕವನ್ನು ಶರತ್ ಕಿರಣ್ ಟಿ, ಸಹ ಛಾಯಾಗ್ರಹಣ ಸೂರಜ್ ಶೆಟ್ಟಿ, ವಿನಯ್ ಶೆಟ್ಟಿಗಾರ್, ನಿರ್ಮಾಣ ವಿಭಾಗ ಅನುಸುಲ್ ಶೆಟ್ಟಿ ತಿಂಬರ, ಆದಿತ್ಯ ಶೆಟ್ಟಿ ತಿಂಬರ, ಪೋಸ್ಟರ್ ಡಿಸೈನ್ ತಾರಾನಾಥ ಆಚಾರ್ಯರವರು ನಿರ್ವಹಿಸಿದ್ದಾರೆ.
ಈ ಕಿರುಚಿತ್ರದಲ್ಲಿ ರಾಧಾಕೃಷ್ಣ ಕುಂಬ್ಳೆ, ಮೋಕ್ಷಿತ್ ಶೆಟ್ಟಿ, ವರ್ಷಾ ಸಿ ಮನೋಜ್, ಕಿರಣ್ ಆಚಾರ್ಯ, ಜ್ಯೋತಿಪ್ರಕಾಶ್ ಶೆಟ್ಟಿ, ಜಯರಾಮ ಆಚಾರ್ಯ ಹೊಸಂಗಡಿ, ವಿಜೇಶ್ ಬಿ ಕೆ ರೈ, ದಿವಾಕರ ಉಪ್ಪಳ, ಅರುಣ್ ಪ್ರಕಾಶ್ ರಾಜ್, ಸಂದೇಶ ಆಚಾರ್ಯ, ರಜನಿ ಚಂದ್ರಹಾಸ ಮುಂತಾದವರು ನಟಿಸಿದ್ದಾರೆ.
