ಮಂಜೇಶ್ವರ:- ಪ್ರಪಂಚಕ್ಕೆ ಸಂಘವನ್ನು ಕೊಟ್ಟ ಭಾರತ ನನ್ನದು. ದೇಶ, ಧರ್ಮ, ಸಂಸ್ಕಾರದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು, ಭಯೋತ್ಪಾದನೆ, ಮತಾಂತರ,
ಲವ್ ಜೀಹಾದ್ , ಲ್ಯಾಂಡ್ ಜೀಹಾದ್ ಗಳ ಬಗ್ಗೆ ಎಚ್ಚರದಿಂದಿರಬೇಕೆಂದು ಹಿಂದೂ ಪ್ರಕರವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ನುಡಿದರು.
ಅವರು ನಿನ್ನೆ ಬೆಳಗ್ಗೆ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಕಾಸರಗೋಡು ಜಿಲ್ಲಾ ಕಾರ್ಯಾಲಯ "ಪ್ರೇರಣಾ" ದ ದ್ವಿತೀಯ ವರ್ಷದ ಕಾರ್ಯಕ್ರಮದ ಪ್ರಯುಕ್ತ ವಿಶ್ವಹಿಂದೂ ಪರಿಷತ್ ಮಂಜೇಶ್ವರ ಖಂಡ ಸಮಿತಿ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ಗಾಟಿಸಿ, ಮಾತನಾಡಿದರು.
ಸರ್ವ ದುಷ್ಟರ ದಾಳಿಯಿಂದ ತತ್ತರಿಸಿದ ಭಾರತವನ್ನು ಮತ್ತೊಮ್ಮೆ ಮೇಲೆತ್ತಬೇಕು,
ಭಾರತದ ಶ್ರೇಷ್ಠತೆಯನ್ನು ಜಗತ್ತಿನ ಮುಂದೆ ತರಬೇಕು ಆಗಿದ್ದಲ್ಲಿ ಮಾತ್ರ ಹಿಂದೂ ಸಮಾಜ ಇಡೀ ವಿಶ್ವದಲ್ಲಿ ಜಗದ್ಗುರುವಾಗಿ ಮಾದರಿಯಾಗಬಲ್ಲುದಾಗಿದೆ. ದೇಶವ್ಯಾಪಿ ಭಯೋತ್ಪಾದಕ ತಂಡಗಳು ಹುಟ್ಟಿಕೊಂಡು ಹಿಂದೂಗಳನ್ನು ಧಮನಿಸಲು
ಲವ್ ಜೀಹಾದ್, ಮತಾಂತರ, ಲ್ಯಾಂಡ್ ಜೀಹಾದ್ ಕೃತ್ಯಗಳನ್ನ ತೆರೆಮರೆಯಲ್ಲಿ ಮಾಡುತ್ತ ಹಿಂದೂತ್ವವನ್ನು ಕುಗ್ಗಿಸಲು ಹೋರಟಿದೆ .
ಇದರ ವಿರುದ್ಧ ಪ್ರತಿಯೊಬ್ಬ ಹಿಂದೂಗಳು ಅರಿತಿರಬೇಕು. ಮತ್ತು ಧರ್ಮ ಸಂಸ್ಕಾರವನ್ನು ಮೆೃಗೂಡಿಸಿ ಕೊಳ್ಳಲು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ್ನು ಬಡಿದ್ದೆಬ್ಬಿಸಲು ಜಗದೊಡೆಯ ಶ್ರೀ ಕೃಷ್ಣ ಪರಮಾತ್ಮ ಜಗತ್ತಿಗೆ ಭಗವದ್ಗೀತೆ ಸಾರವನ್ನು ಸಾರಿದರು..
ಅದೇ ರೀತಿ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಹಿಂದೂವು ಕೂಡ ಈ ಭಗವದ್ಗೀತೆಯನ್ನು ಪ್ರತಿ ನಿತ್ಯ ಪಠಿಸುವುದರೊಂದಿಗೆ ಸಂಸ್ಕಾರ ಸಂಸ್ಕೃತಿಗಳನ್ನ ಮೆೃಗೂಡಿಸಿಕೊಳ್ಳುಬಹುದು
ಅದೇ ರೀತಿ ಮತಾಂತರ ಮುಂತಾದ ಜೀಹಾದಿ ಕೃತ್ಯಗಳನ್ನ ತಡೆಯಬಹುದು ಎಂದು ಅವರು ಹೇಳಿದರು.
ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಉಳುವಾನ ಶಂಕರ ನಾರಾಯಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಕೃಷ್ಣಮೂರ್ತಿ, ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್, ಧಾರ್ಮಿಕ ಮುಂದಾಳು ವಿಜಯ ಪಂಡಿತ್ ಉಪ್ಪಳ, ವಿಕಾಸ್ ಶೆಟ್ಟಿ ಮಹಾಲಿಂಗೇಶ್ವರ ಕುಂಜತ್ತೂರು, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಜಾತ ಎಸ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಲ್ಲಂಬೆಟ್ಟು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕು. ಅಂಕಿತಾ ಹಾಗೂ ಕು. ಅನನ್ಯ ಪ್ರಾರ್ಥನೆ ಹಾಡಿ, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಧಾರ್ಮಿಕ ಮುಂದಾಳು ದಿನಕರ್ ಬಿ.ಎಂ ನಿರೂಪಿಸಿ, ವಿಶ್ವಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಯಾದವ ಕೀರ್ತೇಶ್ವರ ವಂದಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಹಿಂದೂ ಭಾಂದವರು, ಕಾರ್ಯಕರ್ತರು, ಭಗಿನಿಯರು, ಮಾತೆಯರು, ಮಕ್ಕಳು ಭಾಗವಹಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಿತು.
ಕಾರ್ಯಾಲಯದ ದ್ವಿತೀಯ ವರ್ಷದ ವಾರ್ಷಿಕೋತ್ಸವದಂಗವಾಗಿ ಬ್ರಹ್ಮ ಶ್ರೀ ಬಡಾಜೆಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರ ಪೌರೋಹಿತ್ಯದಲ್ಲಿ ಬೆಳಗ್ಗೆ ಗಣಪತಿಹೋಮ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
✍️ ಶ್ರೀ ರತನ್ ಕುಮಾರ್ ಹೊಸಂಗಡಿ.
📸 ಶ್ರೀ ದೀಪಕ್ ರಾಜ್ ಉಪ್ಪಳ.
