ಎಂಸಿಸಿ ಮಂಜೇಶ್ವರ ವತಿಯಿಂದ ಎರಡು ದಿನದ ಅಂಡರ್ ಆರ್ಮ್ ಕ್ರಿಕೆಟ್ |ಎಂಸಿಸಿ ಗುಡ್ಡೆ ಪ್ರಥಮ
December 06, 2021
0
ಮಂಜೇಶ್ವರ : ಎಂಸಿಸಿ ಮಂಜೇಶ್ವರ ಇದರ ವತಿಯಿಂದ ಎರಡು ದಿನದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ1 ಮಂಜೇಶ್ವರ ಗೋವಿಂದ ಪೈ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಪ್ರಥಮ ಬಹುಮಾನ ನಗದು 10000ರೂ ಹಾಗೂ ಟ್ರೋಫಿಯನ್ನು ಎಂಸಿಸಿ ಗುಡ್ಡೆ ಹಾಗೂ ದ್ವಿತೀಯ ಬಹುಮಾನ ನಗದು 5000 ಹಾಗೂ ಟ್ರೋಫಿಯನ್ನು ವೈಎಂಸಿ ಮಂಜೇಶ್ವರ ತಂಡವು ಗಳಿಸಿತು. ಫೈನಲ್ ಪಂದ್ಯದ ಮುಖ್ಯ ಅತಿಥಿಯಾಗಿ ( ಓ.ಬಿ.ಸಿ ) ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಅಧ್ಯಕ್ಷರಾದ ಇದ್ರಿಸ್ ಮಂಜೇಶ್ವರ ಭಾಗವಹಿಸಿದ್ದರು. ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಹಾಗೂ ಆಲ್-ರೌಂಡರ್ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಬೆಸ್ಟ್ ಬೌಲರ್ ಬೆಸ್ಟ್ ವಿಕೆಟ್ ಕೀಪರ್ ಬಹುಮಾನವನ್ನು ಇದ್ರಿಸ್ ಮಂಜೇಶ್ವರ ವಿತರಿಸಿದರು. ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Tags
