ಕುಂಬಳೆ : ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ "ಯುವಧ್ವನಿ 2022"ರ ಕಾರ್ಯಕ್ರಮವನ್ನು ಎಬಿವಿಪಿ ವತಿಯಿಂದ ಕುಂಬಳೆಯ ಐಎಚ್ಆರ್ಡಿ ಕಾಲೇಜಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಎಬಿವಿಪಿ ಕೇರಳ ರಾಜ್ಯ ಘಟಕದ ಕಾರ್ಯದರ್ಶಿಯಾದ ಶ್ರೀ ಹರಿ ರಾಜಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಎಬಿವಿಪಿ ಐಎಚ್ಆರ್ಡಿ ಯೂನಿಟ್ ಅಧ್ಯಕ್ಷರಾದ ಶ್ರೀ ಕಿಸನ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಬಿವಿಪಿ ಕೇರಳ ರಾಜ್ಯ ಘಟಕದ ಸದಸ್ಯರಾದ ಪ್ರಮೋದ್ ಉಪ್ಪಳ, ವಿಷ್ಣು ನೀಲೇಶ್ವರ, ಜಿಲ್ಲಾ ಸಮಿತಿ ಸದಸ್ಯೆಯಾದ ವಿದ್ಯಾ ಎಸ್ ಮಂಜೇಶ್ವರ ನಗರ ಸಮಿತಿಯ ಅಧ್ಯಕ್ಷೆಯಾದ ನವ್ಯ ಆರ್, ಉಪಾಧ್ಯಕ್ಷರಾದ ಸತ್ಯರಾಜ್ ಜೊತೆ ಕಾರ್ಯದರ್ಶಿ ಪುಷ್ಪರಾಜ್ ಹಾಗೂ ಯೂನಿಟ್ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪ್ರಥಮ ಪದವಿಯ ಅನುಷಾ ಅವರು ಸ್ವಾಗತಿಸಿ ದ್ವಿತೀಯ ಪದವಿಯ ಹರ್ಷಿತ್ ವಂದಿಸಿದರು. ದ್ವಿತೀಯ ಪದವಿಯ ನಿಶಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಸ್ವಾಮಿ ವಿವೇಕಾನಂದರು ವಹಿಸಿದ ಪುಣ್ಯ ಕಾರ್ಯಗಳನ್ನು ನಾವು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶಿಕ್ಷಣದ ಜೊತೆ ವಿದ್ಯಾರ್ಥಿ ಸಂಘಟನೆಯಲ್ಲಿ ಎಲ್ಲಾ ದೇಶಪ್ರೇಮಿ ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದು ರಾಜ್ಯ ಕಾರ್ಯದರ್ಶಿ ಶ್ರೀ ಹರಿ ಅಭಿಪ್ರಾಯಪಟ್ಟರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
