ಕುಂಬಳೆ: ಊರ ಪರವೂರ ಭಕ್ತರ ಧನ ಸಹಾಯದಿಂದ ಜನವರಿ 17 ರಂದು ನಡೆಯುವ ಇತಿಹಾಸ ಪ್ರಸಿದ್ಧ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ "ಕುಂಬಳೆ ಬೆಡಿ" ಮಹೋತ್ಸವದ ದೇಣಿಗೆ ಸಂಗ್ರಹಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ಬೆಡಿ ಮಹೋತ್ಸವ ಸ್ವಯಂ ಸೇವಾ ಸಮಿತಿಯ ವತಿಯಿಂದ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾಧವ ಅಡಿಗರವರು ಶ್ರೀ ಗೋಪಾಲಕೃಷ್ಣ ದೇವರಲ್ಲಿ ಪ್ರಾರ್ಥನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಸದಾನಂದ ಕಾಮತ್, ಸಮಿತಿಯ ಉಪಾಧ್ಯಕ್ಷರಾದ ಎಸ್.ಸದಾನಂದ ಕಾಮತ್, ಹಿರಿಯರಾದ ಕೆ. ನಾರಾಯಣ ಪ್ರಭು ಹಾಗೂ ಭಕ್ತದಿಗಳು ಉಪಸ್ಥಿತರಿದ್ದರು.
ಇತಿಹಾಸ ಪ್ರಸಿದ್ಧ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ "ಕುಂಬಳೆ ಬೆಡಿ" ಮಹೋತ್ಸವದ ದೇಣಿಗೆ ಸಂಗ್ರಹ ಚಾಲನೆ
January 04, 2022
0
Tags
