ಉಪ್ಪಳ : ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದ ವಾರ್ಷಿಕ ಉತ್ಸವದ ಪುಣ್ಯ ಸಂದರ್ಭದಲ್ಲಿ "ಸತ್ಯೊದ ಅಪ್ಪೆ ಮಹಾಂಕಾಳಿ" ಹಾಗೂ "ಕಾರ್ಣಿಕದ ದೈವೊಲು" ಎಂಬ ಭಕ್ತಿಗೀತೆ ಬಿಡುಗಡೆ ಸಮಾರಂಭ ಜರಗಿತು.
ಸತ್ಯೊದ ಅಪ್ಪೆ ಮಹಾಂಕಾಳಿ ಎಂಬ ಭಕ್ತಿಗೀತೆಯನ್ನು ಸಮಾಜ ಸೇವಕ ವಿಜಯ ಪಂಡಿತ್ ಉಪ್ಪಳ ಅವರು ಬಿಡುಗಡೆಗೊಳಿಸಿದರು.
ಇದರ ನಿರ್ಮಾಣವನ್ನು ಮಹೇಶ್ರವರು ಮಾಡಿದ್ದು ಸಾಹಿತ್ಯವನ್ನು ಅಕ್ಷಯ್ ಬರೆದಿದ್ದಾರೆ. ಸುಧೀಶ್ ಕೆ ಬಂಬ್ರಾಣರವರ ಗಾಯನದಲ್ಲಿ ಮೂಡಿಬಂದ ಈ ಭಕ್ತಿಗೀತೆಯನ್ನು ನಿರ್ದೇಶನದಲ್ಲಿ ಧನು ಕೆ ಬೇಕೂರು
ಹಾಗೂ ಎಡಿಟಿಂಗ್ನಲ್ಲಿ ಕೃತಿಕ್ ಸಹಕರಿಸಿದ್ದಾರೆ.
ಈ ಭಕ್ತಿಗೀತೆಯ ನಿರ್ಮಾಣ ಶುಭದೀಪ್,
ಸಾಹಿತ್ಯ: ಧನು ಕೆ ಬೇಕೂರು, ಗಾಯನ: ಸುಧೀಶ್ ಕೆ ಬಂಬ್ರಾಣ, ನಿರ್ದೇಶನ: ಮಹೇಶ್ ಹಾಗೂ ಕೃತಿಕ್ ಅವರು ಎಡಿಟಿಂಗ್ ನಲ್ಲಿ ಸಹಕಾರ ನೀಡಿದ್ದಾರೆ.
ಸಮಾರಂಭದಲ್ಲಿ ಮಂಜುನಾಥ್ ಕುಂದರ್ ಅವರು ಭಕ್ತಿಗೀತೆ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರನ್ನೂ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.
ವರದಿ ಮತ್ತು ಚಿತ್ರಗಳು : ದೀಪಕ್ ರಾಜ್ ಉಪ್ಪಳ
