ಮಂಜೇಶ್ವರ:- ನಿಸ್ವಾರ್ಥ ಭಕ್ತಿ, ತ್ಯಾಗ ಭಾವದಿಂದ ಭಗವಂತನ ಪರಿಪೂರ್ಣ ಅನುಗ್ರಹ ಸಾಧ್ಯ ಎಂದು ಮಾಣಿಲ ಶ್ರೀ ಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು. ಅವರು ವರ್ಕಾಡಿ ಬಜಿಲಕರಿಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರಂಗಪಾಣಿ ಮಹಾವಿಷ್ಣು ದುರ್ಗಾ ಕ್ಷೇತ್ರದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಸಂಜೆ ನಡೆದ ದ್ವಿತೀಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡುತ್ತಾ, ಮಾತನಾಡಿದರು.
ಮಂಗಳೂರು ಬೆಸೆಂಟ್ ಕಾಲೇಜ್ ನ ಕನ್ನಡ ವಿಭಾಗದ ನಿಕಟಪೂರ್ವ ಮುಖ್ಯಸ್ಥರಾದ ಶ್ರೀಮತಿ ಮೀನಾಕ್ಷಿ ರಾಮಚಂದ್ರನ್ ಪ್ರಧಾನ ಭಾಷಣ ಮಾಡಿದರು. ದುಬೈ ಉದ್ಯಮಿ ಶ್ರೀ ಗಣೇಶ್ ನಾಯ್ಕ್ ಅದೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಮುಖಂಡರುಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ಯೋಜನಾಧಿಕಾರಿ ಪ್ರವೀಣ್ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ್ ಭಟ್ ವೇದೋಡಿ, ಎ. ಬಾಲಕೃಷ್ಣ ನಾಯ್ಕ್ ಆಲಿಕೋಡಿ, ರಾಧಾಕೃಷ್ಣ ನಾಯ್ಕ್, ದೇವಪ್ಪ ಶೆಟ್ಟಿ ಚಾವಡಿಬೈಲು, ಐತಪ್ಪ ಶೆಟ್ಟಿ ದೇವ0ದಪಡ್ಪು, ಸತ್ಯ ಶಂಕರ ನಾಯ್ಕ್ ಕಳಿಯೂರು, ಮಹೇಶ್ ಚೌಟ, ಗಂಗಾಧರ್ ಉಡುಪಿ, ರಾಜ ಗೋಪಾಲ ಭಟ್, ಡಾ. ಅಮಿತ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ವಿಶ್ವನಾಥ ನಾಯ್ಕ್ ಪಿಲಿಕಳ, ರಾಜರಾಮ್ ರಾವ್ ಮೀಯಪದವು, ಸುಧಾಕರ ಕೊಡ್ಲಮೊಗರು, ವಿಠಲ್ ನಾಯ್ಕ್ ಸುಳ್ಯ, ಬಾಲಕೃಷ್ಣ ದೀಕ್ಷಾ ವುಡ್ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು.
ಈ ವೇಳೆ ಕ್ಷೇತ್ರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಕ್ರೀಯರಾಗಿಯೂ, ಅವಿರತವಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾವಳ ಒಕ್ಕೂಟದ ಸೇವೆಯನ್ನು ಸ್ಮರಿಸಿ, ಶ್ರೀ ಶಾರಂಗಪಾಣಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಶ್ರೀ ಮುಖೇಶ್ ರವರನ್ನ ಶಾಲು ಹೊದಿಸಿ, ಫಲಫುಷ್ಪ,ಸ್ಮರಣಿಕೆ, ನೀಡಿ ಗೌರವಿಸಲಾಯಿತು. ಪ್ರಕಾಶ್ ನಾಯ್ಕ್ ಆಲಿಕೋಡಿ ಸ್ವಾಗತಿಸಿ, ರವೀಂದ್ರ ಕುಲಾಲ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿ, ಕಿಶೋರ್ ಪಾವಳ ವಂದಿಸಿದರು.
ಅಪರಾಹ್ನ ಶ್ರೀ ಸಂತಾನ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಛತ್ರ ಆನೆಕಲ್ಲು ಇವರಿಂದ "ನರಕಾಸುರ ಮೋಕ್ಷ" ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕ್ಷೇತ್ರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಶಿವಾನಂದ ಮಂಗಲ್ಪಾಡಿ ಸಾರಥ್ಯದ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚನೆಯ "ಗಿರಿಗೆಟ್ ಗಿರಿಧರೆ" ಎಂಬ ತುಳು ಹಾಸ್ಯಮಯ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ.
✍️ ರತನ್ ಕುಮಾರ್ ಹೊಸಂಗಡಿ.
📸 ದೀಪಕ್ ರಾಜ್ ಉಪ್ಪಳ. ಹಾಗೂ ಹರೀಶ್ ನಾಯ್ಕ್ ಕಟ್ಟೆಪುಣಿ.
