ಮಂಜೇಶ್ವರ:- ನೃತ್ಯ, ಕುಣಿತ ಭಜನೆ, ತರಬೇತಿಯ ಮೂಲಕ ಯಾವುದೇ ವಯಸ್ಸಿನ ಮಿತಿಯಿಲ್ಲದ ನಿಸ್ವಾರ್ಥ ಸೇವೆಯನ್ನು ನೀಡುವ ಉದ್ದೇಶದಿಂದ ಅರಸು ಡ್ಯಾನ್ಸ್ ಕಂಪೆನಿ ಶುಭಾರಂಭಗೊಂಡಿತು. ಸಮಾರಂಭದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡರ ದಿವ್ಯ ಹಸ್ತದಿಂದ ದೀಪಪ್ರಜ್ವಲನೆಗೊಂಡು, ಶ್ರೀತಿಮೆರಿ ಬೆಲ್ಚಪ್ಪಾಡರ ಶುಭಾಶೀರ್ವಾದದೊಂದಿಗೆ ಸಭಾ ಕಾರ್ಯಕ್ರಮವು ತೀಯಾ ಸಮಾಜ ಭವನ ಉದ್ಯಾವರ ಮಾಡದಲ್ಲಿ ಜರುಗಿತು. ಸಮಾರಂಭದಲ್ಲಿ ತೀಯಾ ಸಮಾಜ ಭವನದ ಅಧ್ಯಕ್ಷರಾದ ನೆಲ್ಲಯ್ಯ, ಪಂಚಾಯತ್ ಸದಸ್ಯೆ ಜಯಶ್ರೀ, ನಟಿ ಜೈ ಶಾಂತಿ, ಸಾಹಿತಿ ಸಂಜೀವ ಶೆಟ್ಟಿ, ಕಲಾವಿದರಾದ ಲಕ್ಷ್ಮಣ, ಇಂಚರ ಸಂಸ್ಥೆಯ ಕೇಶವ ಕನಿಲ,ಅರಸು ಡ್ಯಾನ್ಸ್ ಕಂಪೆನಿಯ ಮಾತಾಜಿ ಶ್ರೀಮತಿ ಸಂಧ್ಯಾ ಉಪೇಂದ್ರ, ಉಪೇಂದ್ರ, ಉಪಸ್ಥಿತರಿದ್ದರು.
ಮಕ್ಕಳಿಗೆ, ಮಹನಿಯರಿಗೆ, ಎಲ್ಲಾ ಸುಸಜ್ಜಿತ ವ್ಯವಸ್ಥೆಯೊಂದಿಗೆ ಸಂಸ್ಥೆಯ ಸೇವೆ
* ಶಾಲಾಮಕ್ಕಳಿಗೆ ನೃತ್ಯ ಸಂಯೋಜನೆ
* ಕಾಲೇಜು ವಿದ್ಯಾರ್ಥಿಗಳಿಗೆ ನೂತನ ನೃತ್ಯ ತರಬೇತಿ
* ರಸಮಂಜರಿ
* ಝುಂಬಾ ಫಿಟ್ನೆಸ್ ತರಬೇತಿ
* ಫಾನ್ಸಿ, ವೇಷಭೂಷಣಗಳು
* ಮೇಕಪ್, ವೇದಿಕೆ ಅಲಂಕಾರಗಳು
* ಕುಣಿತ ಭಜನೆ ತರಬೇತಿ
* ನಾಟಕ ನಿರ್ದೇಶನ, ತರಬೇತಿ
* ನಿಮ್ಮ ಮನೆ ಸಂಭ್ರಮ, ಹುಟ್ಟು ಹಬ್ಬ, ಮದುವೆ ಸಮಾರಂಭದ ಕಾರ್ಯಕ್ರಮದ ಸಂಯೋಜನೆ
* ಎಲ್ಲಾ ತರದ ಕಲಾ, ಸಾಂಸ್ಕೃತಿಕ ಕಾರ್ಯಕ್ರಮ ಗಳು, ಸಂಯೋಜನೆ, ನಿರ್ದೇಶನ, ಕೊರಿಯೋಗ್ರಫಿ ಎಲ್ಲಾ ತರದ ಅನುಭವಿ ಶಿಕ್ಷಕರಿಂದ ತರಬೇತು ನೀಡುವ
ಅರಸು ಡ್ಯಾನ್ಸ್ ಕಂಪೆನಿ ಮಂಜೇಶ್ವರ
ಕರೆಮಾಡಿ:-7356929303
