ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿಯಾಗಿ ಹೊಸಂಗಡಿಯ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
June 23, 2022
0
ಹೊಸಂಗಡಿ : ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ಹೊಡೆದು ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂಗ್ರ ಮಂಜೇಶ್ವರ ಕಟ್ಟೆಬಜಾರ್ ನಡೆದಿದೆ. ರೈಲ್ವೆ ಗೇಟ್ ಬಳಿಯ ನಿವಾಸಿ ಹೊಸಂಗಡಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ದಿನೇಶ್ ಕುಮಾರ್ ಎಂಬುವರ ಪುತ್ರ ದೀಕ್ಷಿತ್(30) ಅಪಘಾತದಲ್ಲಿ ಮೃತ ದುರ್ದೈವಿ. ಮುಂಜಾನೆ 3.30ಗಂಟೆ ಹೊತ್ತಿಗೆ ಮೀನುಗಾರಿಕೆಗೆ ತೆರಳುತ್ತಿದ್ದವರು ಇವರ ಮೃತದೇಹವು ಚರಂಡಿಯಲ್ಲಿ ಬಿದ್ದಿರುವುದನ್ನು ಕಂಡು ಮಂಜೇಶ್ವರ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಲಿಸರು ಪರಿಶೀಲನೆ ನಡೆಸಿದಾಗ ಮೃತಪಟ್ಟವರು ದೀಕ್ಷಿತ್ ಎಂದು ತಿಳಿದುಬಂದಿದೆ. ಅಪಘಾತವು ನಿನ್ನೆ ರಾತ್ರಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು ಅವಿವಾಹಿತರಾಗಿದ್ದರು. ಮೃತ ತಾಯಿ ಸುಮತಿ, ಸಹೋದರ ಲಕ್ಷ್ಮೀಶ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಚಕ್ರವರ್ತಿ (ರಿ.) ಹೊಸಂಗಡಿ ಇದರ ಸದಸ್ಯರಾಗಿದ್ದರು.
Tags


