ಸಿಟಿ ಸೆಂಟರ್ ಆಟೋ ರಿಕ್ಷಾ ಪಾರ್ಕ್ ಸಮಿತಿಯ ವಾರ್ಷಿಕ ಮಹಾ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ, ಸನ್ಮಾನ ಕಾರ್ಯಕ್ರಮ
December 07, 2022
0
ಮಂಗಳೂರು : ಸಿಟಿ ಸೆಂಟರ್ ಆಟೋ ರಿಕ್ಷಾ ಪಾರ್ಕ್ ಸಮಿತಿಯ ವಾರ್ಷಿಕ ಮಹಾ ಸಭೆಯು ನಂತೂರಿನ ಬಬ್ಬು ಸ್ವಾಮಿ ಮಿನಿಹಾಲ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನಂತರ ಸನ್ಮಾನ ಕಾರ್ಯಕ್ರಮ ಜರಗಿತು. ನೂತನ ಸಮಿತಿಯ ಗೌರವಾಧ್ಯಕ್ಷರುಗಳಾಗಿ ಅಶೋಕ್, ರವಿ ಸುವರ್ಣ, ಅಧ್ಯಕ್ಷರಾಗಿ ಭರತ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಸಾದ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪಳನ್ನ, ಜೊತೆ ಕಾರ್ಯದರ್ಶಿಯಾಗಿ ರವಿ ಪೂಜಾರಿ, ಕೋಶಾಧಿಕಾರಿಯಾಗಿ ಚೇತನ್ ಕುಲಾಲ್, ಸಮಿತಿಯ ವಕ್ತಾರರಾಗಿ ಕೃಷ್ಣ ರಾಜ್, ಸಲಹೆಗಾರರಾಗಿ ಕೆಎಚ್ ಬಂಗೇರ,ಕೋರ್ ಕಮಿಟಿಯ ಸದಸ್ಯರಾಗಿ ಉದಯ, ಪ್ರಶಾಂತ್ ಆಚಾರ್ಯ, ಯೋಗೀಶ್ ರೈ, ಉಮೇಶ್ ಕುಲಶೇಖರ, ಗಿರೀಶ್ ಪಾಂಡೇಶ್ವರ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಕೃಷ್ಣ ರಾಜ್ ಸ್ವಾಗತಿಸಿ, ನಿರೂಪಿಸಿದರು. ಕೆಎಚ್ ಬಂಗೇರ ವಂದಿಸಿದರು.
Tags


