ಮಾನ್ಯ : ಊರಿನ ದೇವಸ್ಥಾನಗಳು, ಮಠ ಮಂದಿರಗಳು ಜೀರ್ಣೋದ್ಧಾರಗೊಂಡು ಬೆಳಗಿದರೆ ಆ ಊರಿನ ಮನೆ-ಮನಗಳು ಬೆಳಗಿದಂತೆ ಎಂದು ಕಾರ್ಮಾರು ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ನಿಧಿ ಕೂಪನ್ ಬಿಡುಗಡೆಗೊಳಿಸಿ ಮಂಗಳೂರಿನ ಖ್ಯಾತ ವೈದ್ಯರಾದ ಡಾ. ನರೇಶ್ ರೈ ಅವರು ನುಡಿದರು. ಗ್ರಾಮದ ಭಕ್ತ ಜನರೆಲ್ಲಾ ಒಂದುಗೂಡಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಆದಷ್ಟು ಬೇಗನೆ ಪೂರ್ಣಗೊಳ್ಳಲಿ ಎಂದು ಈ ಸಂದರ್ಭದಲ್ಲಿ ನುಡಿದರು. ಧಾರ್ಮಿಕ ಮುಂದಾಳು, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ಖ್ಯಾತ ವೈದ್ಯರಾದ ಡಾಕ್ಟರ್ ಜನಾರ್ಧನ ನಾಯಕ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಜನಪ್ರತಿನಿಧಿ ಶ್ಯಾಮ್ ಪ್ರಸಾದ್ ಮಾನ್ಯ, ಆಡಳಿತ ಮೊಕ್ತೇಸರರಾದ ನರಸಿಂಹ ಭಟ್ ಕಾರ್ಮಾರ್, ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣ ಪುದುಕೋಳಿ, ಮಾನ ಮಾಸ್ಟರ್ ಕಾರ್ಮಾರು, ಶ್ಯಾಮ್ ಭಟ್ ಏವುಂಜೆ, ರಾಮ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಪುದುಕೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿ, ವಿಜಯ್ ಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
ಊರಿನ ದೇವಸ್ಥಾನಗಳು, ಮಠ ಮಂದಿರಗಳು ಜೀರ್ಣೋದ್ಧಾರಗೊಂಡು ಬೆಳಗಿದರೆ ಆ ಊರಿನ ಮನೆ-ಮನಗಳು ಬೆಳಗಿದಂತೆ - ಡಾ. ನರೇಶ್ ರೈ
December 06, 2022
0
Tags


