ಪೈವಳಿಕೆ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ
December 06, 2022
0
ಪೈವಳಿಕೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಯೋಜನೆಯ ಪೈವಳಿಕೆ ವಲಯ ಇದರ ಸಹಕಾರದೊಂದಿಗೆ ಜ್ಞಾನಜೋತಿ ನವಜನ ಸಮಿತಿಯ 5ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ತಿಂಗಳ 31ರಂದು ಪೈವಳಿಕೆ ಲಾಲ್ಬಾಗ್ ಎಂಬಲ್ಲಿ ಜರಗಲಿರುವ ಶ್ರೀ ಗೆಜ್ಜೆಗಿರಿ ಮೇಳದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಸೇವಾ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಅಶ್ವಥ್ ಪೂಜಾರಿ ಲಾಲ್ ಬಾಗ್, ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಪೈವಳಿಕೆ ಇದರ ಕೋಶಾಧಿಕಾರಿ ಶ್ರೀ ಮಹಾಬಲ ಪೂಜಾರಿ ಸುದೇoಬಳ, ಸೇವಾಪ್ರತಿನಿಧಿ ಶ್ರೀಮತಿ ಲೀಲಾವತಿ ಪಾಡಿ, ಶ್ರೀ ಸುರೇಶ್ ಅಮ್ಮೇರಿ, ಜ್ಞಾನಜೋತಿ ನವಜೀವನ ಸಮಿತಿ ಅಧ್ಯಕ್ಷ ಶ್ರೀ ರಾಜೇಶ್, ಸದಸ್ಯರಾದ ಶ್ರೀ ಆನಂದ ಪಿ ಬಾಲೆಹಿತಿಲು, ಪ್ರಸಾದ್ ಜೋಡುಕಲ್ಲು, ಸುಂದರ, ಶಶಿಧರ ಬಾಯಿಕಟ್ಟೆ, ಯಶೋದಾರ, ಕೃಷ್ಣ ಕನ್ಯಾನ, ಲಕ್ಷ್ಮಣ ಕನ್ಯಾನ, ರಘು ಪೆರ್ಮುದೆ, ಚಂದ್ರ ಪೆರ್ಮುದೆ, ರಾಮಚಂದ್ರ ಬಾಯಿಕಟ್ಟೆ, ಪ್ರಶಾಂತ್ ಪೈವಳಿಕೆ, ವಿನೋದ್, ಜಗನಾಥ, ಮತ್ತು ಪ್ರಭಾಕರ ಉಪಸ್ಥಿತರಿದ್ದರು.


