ಆಯೋಜಿಸಲಾಗಿತ್ತು.
(ಸಾಂದರ್ಭಿಕ ಚಿತ್ರ)
ಇದು 300ನೇ ಪ್ರಯೋಗ ಮತ್ತು ಕಾಸರಗೋಡು ಜಿಲ್ಲೆಯ 10ನೇ ಪ್ರಯೋಗ. ನಿನ್ನೆ ಮಧ್ಯಾಹ್ನ ವೇಳೆ ಯಕ್ಷಗಾನದ ಪ್ರದರ್ಶನದ ತಯಾರಿಯ ಚೌಕಿಗೆ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂದು ಯಕ್ಷಗಾನ ಪ್ರದರ್ಶನ ನಡೆಸಬಾರದಾಗಿಯೂ ಪ್ರದರ್ಶನ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಆದುದರಿಂದ ಯಕ್ಷಗಾನ ಬಯಲಾಟದ ಪ್ರಸಂಗವನ್ನು ಬದಲಾವಣೆ ಮಾಡಿ "ಮಹಿಮೆದ ಮಂತ್ರ ದೇವತೆ" ಎಂಬ ಯಕ್ಷಗಾನ ಪ್ರದರ್ಶನ ನಡೆಸಲಾಯಿತು. ಎಂದು ಮೇಳದ ವ್ಯವಸ್ಥಾಪಕರಾದ ಸುರೇಂದ್ರ ಮಲ್ಲಿಯವರು ಮಂಜುಶ್ರೀ ನ್ಯೂಸ್ಗೆ ತಿಳಿಸಿದ್ದಾರೆ.
ಕಾರಣವೇನು ಗೊತ್ತೇ!?
ಇತ್ತೀಚೆಗೆ ಕಾಸರಗೋಡು ಜಿಲ್ಲಾ ಕೊರಗ ಸಾಂಪ್ರದಾಯಿಕ ವಿಮೋಚನ ರಂಗ(ರಿ.) ಕಾಸರಗೋಡು ಇದರ ವತಿಯಿಂದ ಕೊರಗಜ್ಜ ವೇಷ ಧರಿಸಿ ಕೊರಗ ಸಮುದಾಯವನ್ನು ಅವಹೇಳನ ಮಾಡಿದ ಅನ್ಯಮತೀಯನ ಈ ಘಟನೆಯನ್ನು ಖಂಡಿಸಿ ಮುಂದೆ ಯಾವುದೇ ಧರ್ಮ, ಜಾತಿಯವರು ಕೊರಗ ಸಮುದಾಯವನ್ನು ಕಡೆಗಣಿಸಬಾರದು. ಅದೇ ರೀತಿ ಈ ಮೊದಲು ನವರಾತ್ರಿಗಳಲ್ಲಿ ಧರಿಸುತ್ತಿದ್ದ ಕೊರಗ ವೇಷವನ್ನು ಯಾವ ರೀತಿ ನಿಷೇಧಿಸಿದ್ದರೊ ಅದೇ ರೀತಿ ಇನ್ನು ಮುಂದೆ ಕೊರಗ ಸಮುದಾಯವು ಆರಾಧಿಸುವ ಕೊರಗಜ್ಜ ದೈವವನ್ನು ಯಾವುದೇ ರೀತಿಯಲ್ಲಿ ಯಕ್ಷಗಾನ, ನಾಟಕದಲ್ಲಿ ಪ್ರದರ್ಶನ ಮಾಡಬಾರದು. ಎಂಬುದಾಗಿ ಡಿಸೆಂಬರ್ 13ರಂದು ಈ ಸಂಘಟನೆಯು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ, ಎಸ್ಎಮ್ಎಸ್ ಆಧಿಕಾರಿಗಳಿಗೂ, ಡಿವೈಎಸ್ಪಿಯವರಿಗೆ, ಕಾಸರಗೋಡು ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ಗಳಿಗೆ, ಪೋಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಗೋಪಾಲ ಕೆ ಪೆರ್ಲ, ಗೌರಾವಾಧ್ಯಕ್ಷರಾದ ಸಂಜೀವ ಪುಳ್ಕೂರು, ಪ್ರಧಾನ ಕಾರ್ಯದರ್ಶಿ ಬಾಬು ಟಿ, ಸಂಚಾಲಕರಾದ ಐತಪ್ಪ ವರ್ಕಾಡಿ ಪದಾಧಿಕಾರಿಗಳು ಮತ್ತು ಸದಸ್ಯರು ಅಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಡಿವೈಎಸ್ಪಿ ಸುರೇಶ್ರವರು ಇನ್ನು ಮುಂದೆ ಕಾಸರಗೋಡು ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಯ ಅಧಿಕಾರಿಗಳಿಗೂ ಕರೆದು ಯಾವುದೇ ಯಕ್ಷಗಾನ, ನಾಟಕದಲ್ಲಿ ಕೊರಗ ಸಮುದಾಯವನ್ನು ಹೋಲುವ ವೇಷಭೂಷಣಗಳನ್ನು ಧರಿಸಬಾರದು. ಅದೇ ರೀತಿ ಕೊರಗಜ್ಜ ದೈವದ ಯಾವುದೇ ಪಾತ್ರವನ್ನು ಮಾಡಬಾರದು ಎಂಬ ನಿರ್ದೇಶನವನ್ನು ನೀಡುವುದಾಗಿ ಅವರು ಸಂಘಟನೆಯ ಪದಾಧಿಕಾರಿಗಳಿಗೆ ಭರವಸೆಯನ್ನು ನೀಡಿದ್ದರು. ಅದೇ ರೀತಿ ಈ ಬಗ್ಗೆ ಮುಂದೆ ಕೊರಗ ಸಮುದಾಯದ ಈ ಜಿಲ್ಲಾ ಸಮಿತಿಯ ವತಿಯಿಂದ ಇಂದು ಬೆಳಗ್ಗೆ ಪೆರ್ಲದಲ್ಲಿ ಸಭೆಯನ್ನು ಕರೆಯಲಾಯಿತು. ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನಿನ್ನೆ ಸಂಜೆ ವೇಳೆ ಯಕ್ಷಗಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಮಂಜೇಶ್ವರ ಠಾಣೆಯ ಪೋಲಿಸ್ ಅಧಿಕಾರಿಗಳು ಇಂದಿನ ದಿನ ಈ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಬಾರದೆಂದು ನೋಟಿಸ್ ನೀಡಿ ತೆರಳಿದ್ದಾರೆ. ಮನವಿಗೆ ಸ್ಪಂದಿಸಿದ ಯಕ್ಷಗಾನ ಮೇಳವು ಪ್ರಸಂಗವನ್ನು ಬದಲಾಯಿಸಿ ಪ್ರದರ್ಶನ ನಡೆಸಿದ್ದಾರೆ. ಇದೀಗ ಕಾಸರಗೋಡು ಜಿಲ್ಲೆಯಲ್ಲಿ ದೈವರಾಧನೆ ಮತ್ತು ಕೊರಗ ಸಮುದಾಯವನ್ನು ಹೋಲುವ ಯಾವುದೇ ಪಾತ್ರಗಳನ್ನು ನಿರ್ವಹಿಸಬಾರದೆಂದು ಮನವಿ ನೀಡಿದ ಕಾರಣದಿಂದ ಹಲವಾರು ಯಕ್ಷಗಾನ ಪ್ರಸಂಗಗಳು, ನಾಟಕಗಳಲ್ಲಿ ಪ್ರಧಾನ ಕಥಾ ವಸ್ತುವಾಗಿ ಪ್ರದರ್ಶನಗೊಳ್ಳುತ್ತಿದೆ. ಇನ್ನು ಮುಂದೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮಂಜುಶ್ರೀ ನ್ಯೂಸ್ನೊಂದಿಗೆ ಮಾತನಾಡಿದ ಮೇಳದ ವ್ಯವಸ್ಥಾಪಕರಾದ ಸುರೇಂದ್ರ ಮಲ್ಲಿರವರು "ನಾವು ಮೂರು ವರ್ಷಗಳಿಂದ ಈ ಪ್ರಸಂಗವನ್ನು ಪ್ರದರ್ಶಿಸುತ್ತಿದ್ದು. ಇಂದು ಇಲ್ಲಿ 300ನೇ ಪ್ರಯೋಗ ಮತ್ತು ಕಾಸರಗೋಡು ಜಿಲ್ಲೆಯಲ್ಲಿ 10ನೇ ಪ್ರಯೋಗ. ಕೊರಗಜ್ಜ ದೈವದ ನೈಜ ಕಥೆಯನ್ನು ಆಧರಿಸಿದ ಈ ಪ್ರಸಂಗದಲ್ಲಿ ಯಾವುದೇ ಧರ್ಮ, ಜಾತಿಯನ್ನು ಅವಹೇಳನಕಾರಿಯಾಗಿ ತೋರಿಸಿಲ್ಲ" ಎಂದರು.

ನಾನು ನಾಲ್ಕು ವರ್ಷದಿಂದ ಬೆಂಕಿನತೆಶ್ವರ ಮೇಳದ ಸತ್ಯದ ಸ್ವಾಮಿ ಕೊರಗಜ್ಜ ಪ್ರಸಂಗವನ್ನು ಇಲ್ಲಿಯ ತನಕ ನೋಡಿಕೊಂಡು ಬಂದಿದ್ದೇನೆ ಇಷ್ಟರವರೆಗೆ ನನಗೆ ಈ ಪ್ರಸಂಗದಲ್ಲಿ ಯಾವುದೇ ರೀತಿಯಾದಂತಹ ಜಾತಿಯ ಬಗೆಯಾಗಲಿ ಅಥವಾ ದೈವ ದೇವರ ಬಗೆಯಾಗಲಿ ನಿಂದನೆ ಮಾತನ್ನು ಕೇಳಿದವನಲ್ಲ ಅಚ್ಚು ಕಟ್ಟದ ಮಾತುಗಾರಿಕೆ ಅದೇ ರೀತಿ ಪಾತ್ರ ಚಿತ್ರನ ಈ ಮೇಳದಲ್ಲಿ ಗಮನಿಸಿದವನು ನಾನು
ReplyDeleteಯಕ್ಷಗಾನ ಅಭಿಮಾನಿ 🙏